Breaking News

ಬೈಲಹೊಂಗಲ : ಗ್ರಾಮ ಪಂಚಾಯತ್ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ ಪಿಡಿಓ

Spread the love

ಬೈಲಹೊಂಗಲ : ಗ್ರಾ.ಪಂ ಸದಸ್ಯನೋರ್ವನಿಗೆ ಪಿಡಿಓ ಓರ್ವನು ಕ್ಷುಲ್ಲಕ ಕಾರಣಕ್ಕೆ ಕಪಾಳ ಮೋಕ್ಷ ಮಾಡಿ ಘಟನೆ ತಾಲೂಕಿನ ನಾಗನೂರ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.

ನಾಗನೂರ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಉಣಕಲ್ಲ ಎಂಬವರಿಗೆ ನಾಗನೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವಿನಾಶ ಅಂಗರಗಟ್ಟಿ ಅವರು ಕಪಾಳಮೋಕ್ಷ ಮಾಡಿದ್ದಾರೆ.

ಘಟನೆ ವಿವರ : ನಾಗನೂರು ಗ್ರಾಮದ ಓರ್ವ ವ್ಯಕ್ತಿಯ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳ ಬಗ್ಗೆ ಪಿಡಿಓ ಅವರನ್ನು ಸದಸ್ಯ ಬಸವರಾಜ ಉಣಕಲ್ಲ ವಿಚಾರಿಸಿದಾಗ ಪಿಡಿಓ ಸದಸ್ಯನಿಗೆ ಯೂಸ್ಲೆಸ್ ಪೆಲೋ ಎಂದು ಬೈದು ಇದನ್ನು ಕೇಳಲು ನೀನ್ಯಾರು ಎಂದು ನಿಂದಿಸಿ ನಿನ್ನ ಕೆಲಸ ನೀನು ಮಾಡು ನನ್ನ ಚೆಂಬರ್‌ಗೆ ಬಂದು ಮಾತನಾಡಬೇಡ ಎಂದು ಹೇಳಿ ಸದಸ್ಯನಿಗೆ ಕಪಾಳಮೋಕ್ಷ ಮಾಡಿದ್ದಾನೆ.

ಇದರಿಂದ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಅಭಿವೃದ್ಧಿಯನ್ನು ಮಾಡುವಂಥ ಅಧಿಕಾರಿಗಳೇ ಈ ರೀತಿ ದರ್ಪ ತೋರಿಸಿದ್ದಾನೆ ಮುಂದೆ ಜನಸಾಮಾನ್ಯರ ಪಾಡೇನು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕಪಾಳ ಮೋಕ್ಷದಿಂದ ಸದಸ್ಯನ ಕೆನ್ನೆ ಉದಿಕೊಂಡಿದ್ದು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಲ್ಲದೆ ಪಿಡಿಓ ಸಹ ಗ್ರಾ.ಪಂ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆಂದು ಪ್ರತಿದೂರು ಸಲ್ಲಿಸಿದ್ದಾರೆ. ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ