ಭೋಪಾಲ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು 71 ಅಡಿ ಉದ್ದದ ಸಿರಿಂಜ್ ಆಕಾರದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ನ ಲಾಲ್ ಘಾಟಿ ಚೌರಹಾದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.
ಈ ವೇಳೆ ಕೋವಿಡ್ -19 ಲಸಿಕೆ ಅಭಿಯಾನಕ್ಕಾಗಿ ಪಕ್ಷದ ಕಾರ್ಯಕರ್ತರು ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಭ್ರಮಾಚರಣೆ ವೇಳೆ ಪಕ್ಷದ ಕಾರ್ಯಕರ್ತರು ಬಿಳಿ ಟೀ ಶರ್ಟ್ ಮತ್ತು ಮುಖವಾಡಗಳನ್ನು ಧರಿಸಿದ್ದರು. ಅಲ್ಲದೆ ಪ್ರಧಾನಿಯವರ ಭಾವಚಿತ್ರ ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ.
“ನಾವು ಇದನ್ನು ಜನರ ಸೇವೆಯ ದಿನವಾಗಿ ನೋಡುತ್ತಿದ್ದೇವೆ. ಇಂದು ಒಟ್ಟು 71 ಜನರು ರಕ್ತದಾನ ಮಾಡಲು ಪ್ರತಿಜ್ಞೆ ಮಾಡಿದ್ದಾರೆ. ಕೇಕ್ ಕೂಡ 71 ಅಡಿ ಉದ್ದವಿತ್ತು. ಜನರಿಗಾಗಿ ಅವರು ಇನ್ನೂ ಕೂಡ ಕೆಲಸ ಮಾಡುತ್ತಲಿರಲಿ” ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಇನ್ನು, ಬಿಜೆಪಿಯು ಗರಿಷ್ಠ ಸಂಖ್ಯೆಯ ಕೋವಿಡ್ -19 ಲಸಿಕೆ ಚುಚ್ಚುಮದ್ದನ್ನು ದಾಖಲಿಸುವ ಮೂಲಕ ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಐತಿಹಾಸಿಕವಾಗಿಸುವ ಗುರಿಯನ್ನು ಹೊಂದಿದೆ. ಭಾರತದ ಕೋವಿಡ್-19 ವ್ಯಾಕ್ಸಿನೇಷನ್ ಗುರುವಾರ 77 ಕೋಟಿ ಮೈಲಿಗಲ್ಲನ್ನು ದಾಟಿದೆ.
Laxmi News 24×7