Breaking News
Home / ರಾಜಕೀಯ / ಸ್ಯಾಂಡಲ್‌ವುಡ್‌ನ ಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ

ಸ್ಯಾಂಡಲ್‌ವುಡ್‌ನ ಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ

Spread the love

ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ಹೃದಯಾಘಾತದಿಂದ ನಿಧನ ಹೊಂದಿದರು. ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಗುರು ಕಶ್ಯಪ್​ ಸೋಮವಾರ (ಸೆಪ್ಟಂಬರ್ 13) ರಾತ್ರಿ ನಿಧನರಾದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಗುರು ಕಶ್ಯಪ್ ಕೊನೆಯುಸಿರು ಎಳೆದರು ಎನ್ನುವ ಮಾಹಿತಿ ತಿಳಿದುಬಂದಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಗುರು ಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿಯುತ್ತಿದ್ದಾರೆ.

ಗಣೇಶ್​ ಅಭಿನಯದ ‘ಸುಂದರಾಂಗ ಜಾಣ’, ರಮೇಶ್​ ಅರವಿಂದ್​ ನಟನೆಯ ‘ಪುಷ್ಪಕ ವಿಮಾನ’, ಪ್ರಿಯಾಂಕಾ ಉಪೇಂದ್ರ ಅಭಿನಯದ ‘ದೇವಕಿ’ ಮುಂತಾದ ಸಿನಿಮಾಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದರು.

15ಕ್ಕೂ ಹೆಚ್ಚು ಸಿನಿಮಾಗಳಿಗೆ ಗುರು ಕಶ್ಯಪ್​ ಸಂಭಾಷಣೆಗಾರರಾಗಿ ಕೆಲಸ ಮಾಡಿದ್ದರು. ನಿಧನಕ್ಕೂ ಮುನ್ನ ಅನೇಕ ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದ್ದರು. ಡಾಲಿ ಧನಂಜಯ ನಟನೆಯ ‘ಮಾನ್ಸೂನ್​ ರಾಗ’, ಶಿವರಾಜ್​ ಕುಮಾರ್​ ಅಭಿನಯದ ‘ಬೈರಾಗಿ’, ‘ವ್ಹೀಲ್​ ಚೇರ್​ ರೋಮಿಯೋ’ ಮುಂತಾದ ಸಿನಿಮಾಗಳಿಗೆ ಗುರು ಡೈಲಾಗ್​ ಬರೆಯುತ್ತಿದ್ದರು. ಆದರೆ ಈ ಸಿನಿಮಾಗಳು ತೆರೆಕಾಣುವುದಕ್ಕೂ ಮುನ್ನವೇ ಗುರು ನಿಧನರಾಗಿದ್ದಾರೆ. ಪತ್ನಿ ಮತ್ತು ಮಗಳನ್ನು ಗುರು ಕಶ್ಯಪ್​ ಅಗಲಿದ್ದಾರೆ.

ಗುರು ಕಶ್ಯಪ್​ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. “ಗುರು ದೇವರಂಥ ಮನುಷ್ಯ ಆಗಿದ್ದರು. ಅತ್ಯುತ್ತಮ ಸಂಭಾಷಣಕಾರನನ್ನು ಚಂದನವನ ಇಂದು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ‘ಪುಷ್ಪಕ ವಿಮಾನ’ ನಿರ್ದೇಶಕ ರವೀಂದ್ರನಾಥ್​ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇನ್ನು ನಟ ರಘು ಮುಖರ್ಜಿ ಟ್ವೀಟ್ ಮಾಡಿ, “ನಮ್ಮ ಪ್ರೀತಿಯ ಗುರು ಕಶ್ಯಪ್ ಇನ್ನಿಲ್ಲ. ನಿಮಗೆ ಗೊತ್ತ ಅವರು ಎಷ್ಟು ಅದ್ಭುತ ಬರಹಗಾರ ಎನ್ನುವುದು. ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ನನಗೆ ಗೊತ್ತಿರುವ ಹಾಗೆ ಅವರು ತುಂಬ ಒಳ್ಳೆಯ ವ್ಯಕ್ತಿ. ಚಿತ್ರೋದ್ಯಮಕ್ಕೆ ಇದು ದಡ್ಡ ನಷ್ಟ. ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿದ್ದಾರೆ.

“ಇದು ನಿಜಕ್ಕೂ ಶಾಕಿಂಗ್​. ಈ ಸತ್ಯವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಸದಾ ತಾಳ್ಮೆಯಿಂದ ನನ್ನ ಕಥೆಗಳನ್ನು ಕೇಳಿ, ಅವುಗಳಿಗೆ ಮೆಚ್ಚುಗೆ ಸೂಚಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬರಹಗಳ ಫಸ್ಟ್​ ಡ್ರಾಫ್ಟ್​ ಓದುವುದನ್ನು ಮಿಸ್​ ಮಾಡಿಕೊಳ್ಳುತ್ತೇನೆ ಸರ್”‘ ಎಂದು ನಟಿ ಆರೋಹಿ ನಾರಾಯಣ್​ ಪೋಸ್ಟ್​ ಮಾಡಿದ್ದಾರೆ.

ನಿರ್ದೇಶಕ ಆಕಾಶ್​ ಶ್ರೀವತ್ಸ, “ಗುರು ಕಶ್ಯಪ್​ ತುಂಬ ಪ್ರತಿಭಾವಂತ ವ್ಯಕ್ತಿ ಆಗಿದ್ದರು. ಕೆಲವೇ ದಿನಗಳ ಹಿಂದೆ ಅವರ ಜೊತೆ ಕೆಲಸ ಮಾಡಿದ್ದೆ. ಒಂದೊಳ್ಳೆಯ ಪ್ರತಿಭೆಯನ್ನು ನಾವು ಕಳೆದುಕೊಂಡೆವು. ಇದು ಶಾಕಿಂಗ್​. ಈ ಸುದ್ದಿ ಕೇಳಲು ಬೇಸರ ಆಗುತ್ತಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರನೇ” ಎಂದು ಗುರು ಕಶ್ಯಪ್​ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ