Breaking News

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಅನುಶ್ರೀಯವರ ನಾಟಕ ಬಯಲಾಗಿದೆ. ಜೈಲಿಗೆ ಹೋಗುವುದು ಫಿಕ್ಸ್…?

Spread the love

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ ವಿಚಾರವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಅನುಶ್ರೀಯವರ ನಾಟಕ ಬಯಲಾಗಿದೆ. ಜೈಲಿಗೆ ಹೋಗುವುದು ಫಿಕ್ಸ್ ಆಗಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020 ಸೆಪ್ಟೆಂಬರ್ ನಲ್ಲಿ ನಾನು ಶುಗರ್ ಡ್ಯಾಡಿ ಎಂದು ಟ್ವೀಟ್ ಮಾಡಿದ್ದೆ. ಆಗ ಮಾಜಿ ಸಿಎಂ ಒಬ್ಬರು ಊಹಾಪೋಹಕ್ಕೆ ನಾಂದಿ ಹಾಡಿದ್ದರು. ಪ್ರಕರಣದ ತನಿಖೆಯನ್ನು ಮಂಗಳೂರು ಪೊಲೀಸರು ಸರಿಯಾಗಿ ಮಾಡಿಲ್ಲ. ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ನಾಯಕ್ ಎತ್ತಂಗಡಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶುಗರ್ ಡ್ಯಾಡಿ ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದರು.

ಅನುಶ್ರೀ ನಾಟಕವಾಡುವುದರಲ್ಲಿ ಪಳಗಿದವರು. ಉತ್ತಮ ಅಭಿನೇತ್ರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಡ್ರಗ್ಸ್ ಪ್ರಕರಣದಲ್ಲಿ ಕಿಶೋರ್ ಶೆಟ್ಟಿ, ತರುಣ್ ಬಂಧನವಾದಾಗಲೇ ತರುಣ್ ಅನುಶ್ರೀ ಡ್ರಗ್ಸ್ ಸೇವನೆ ಹಾಗೂ ಪೆಡ್ಲಿಂಗ್ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದ. ಅನುಶ್ರೀ ಬಚಾವ್ ಮಾಡಲು ತರುಣ್ ನನ್ನು ಪ್ರಕರಣದಿಂದ ಕೈಬಿಟ್ಟು ಕಳುಹಿಸಿದರು. ಪೊಲೀಸ್ ವಿಚಾರಣೆಗೆ ಹಾಜರಾಗಲು ಅನುಶ್ರೀ ನಾಟಕ ಮಾಡಿದರು. ಬಳಿಕ ಫೇಸ್ ಬುಕ್ ಲೈವ್ ಗೆ ಬಂದು ಕಣ್ಣೀರಿಟ್ಟು ನಾಟಕ ಮಾಡಿದ್ರು. ನನ್ನನ್ನು ಸ್ತ್ರೀ ವಿರೋಧಿ ಎನ್ನುವ ರೀತಿ ಬಿಂಬಿಸಿದರು. ಈ ಪ್ರಕರಣದಲ್ಲಿ ಮಂಗಳೂರು ಪೊಲೀಸರು ವೀಕ್ ಆಗಿದ್ದು ಯಾಕೆ?  ಎಸಿಪಿ ಗಾಂವ್ಕರ್ ತನಿಖೆ ನಡೆಸಲಿಲ್ಲ ಯಾಕೆ? ಪ್ರಕರಣದ ಬಗ್ಗೆ ಮರು ತನಿಖೆಯಾಗಲಿ ಎಂದು ಆಗ್ರಹಿಸಿದರು.

ಅನುಶ್ರೀ ಮಂಗಳೂರಿನಲ್ಲಿ 12 ಕೋಟಿ ರೂಪಾಯಿ ಮನೆ ಕಟ್ಟಿಸಿದ್ದಾರೆ. ಬೆಂಗಳೂರಿನಲ್ಲಿ 4 ಕೋಟಿ ಮೌಲ್ಯದ ಮನೆ ಕಟ್ಟಿಸಿದ್ದಾರೆ. ಇದಕ್ಕೆಲ್ಲ ಹಣ ಟಿವಿ ಶೋದಿಂದಲೇ ಬಂದಿದೆ ಎನ್ನುವುದಾದರೆ ನಿಜಕ್ಕೂ ಅವರನ್ನು ಮೆಚ್ಚಲೇಬೇಕು. ಆದರೆ ಅನುಶ್ರೀ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಇನ್ನು ಸ್ಯಾಂಡಲ್ ವುಡ್ ನ ಸ್ಟಾರ್ ನಟ, ನಟಿ ಇಬ್ಬರು ಓವರ್ ಡೋಸ್ ಡ್ರಗ್ಸ್ ನಿಂದಲೇ ಸಾವನ್ನಪ್ಪಿದ್ದಾರೆ. ನಾನು ಬರೆದಿರುವ ಶುಗರ್ ಡ್ಯಾಡಿ ಪುಸ್ತಕದಲ್ಲಿ ಇದರ ಬಗ್ಗೆಯೂ ಉಲ್ಲೇಖವಿದೆ. ಶೀಘ್ರದಲ್ಲಿಯೇ ಬುಕ್ ರಿಲೀಸ್ ಮಾಡುತ್ತೇನೆ. ನವೆಂಬರ್ 1ರಂದು ನಾಗೇಂದ್ರ ಪ್ರಸಾದ್ ಅವರ ನಶೆ ಪುಸ್ತಕ ಕೂಡ ಬಿಡುಗಡೆಯಾಗಲಿದೆ.  ಡ್ರಗ್ ಸೇವನೆ ಮಾಡುವವರ ಹೆಸರನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.


Spread the love

About Laxminews 24x7

Check Also

ಅರಭಾವಿ ಆಂಜನೇಯ ದೇವರ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅರಭಾವಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ