Breaking News

ಪಕ್ಷ ಸಂಘಟನೆಗೆ ಕ್ರಿಯಾಶೀಲತೆ ಅಗತ್ಯ

Spread the love

ಕೊಪ್ಪಳ: ‘ಜಿಲ್ಲಾ ಕಾಂಗ್ರೆಸ್ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಲು ದೂರದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಎಲ್ಲ ಮುಂಚೂಣಿ ಘಟಕಗಳು ಪ್ರತಿ ವಾರ ಒಂದು ಕಾರ್ಯಕ್ರಮ ಮಾಡಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಮನವಿ ಮಾಡಿದರು.

ಅವರು ಮಂಗಳವಾರ ಪಕ್ಷದ ಕಚೇರಿಯಲ್ಲಿ ವಿವಿಧ ಮೋರ್ಚಾ, ಬ್ಲಾಕ್‌ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪ್ರತಿ ಘಟಕವೂ ಸಹ ಜಿಲ್ಲಾ ಪದಾಧಿಕಾರಿಗಳು ಮತ್ತು ಏಳು ಬ್ಲಾಕ್‍ಗಳನ್ನು ಹೊಂದಿರಬೇಕು. ಎಲ್ಲರೂ ಒಂದೊಂದು ಗ್ರೂಪ್ ಮಾಡಬೇಕು. ಕೇವಲ ವಾಟ್ಸ್‌ಆಯಪ್‌ ಸಂದೇಶವನ್ನು ಗಮನಿಸಿ ಸಭೆ, ಸಮಾರಂಭ ಮತ್ತು ಹೋರಾಟಗಳಲ್ಲಿ ಭಾಗವಹಿಸುವ ಹಾಗೆ ಸಮಿತಿಯ ಸದಸ್ಯರನ್ನು ತಯಾರು ಮಾಡಬೇಕು. ಪಕ್ಷ ಸಂಘಟನೆ ಎಂದರೆ ಕೇವಲ ಆಡೋಣ ಬಾ ಕೆಡಿಸೋಣ ಬಾ ಎಂದು ಭಾವಿಸುವವರನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರತಿ ಬ್ಲಾಕ್ ಅಧ್ಯಕ್ಷರ ನೇಮಕದ ವೇಳೆ ಆಯಾ ಶಾಸಕ, ಮಾಜಿ ಶಾಸಕರ ಗಮನಕ್ಕೆ ತಂದು ನೇಮಕ ಮಾಡಬೇಕು, ಒಂದು ವೇಳೆ ನಿಗದಿತ ಸಮಯಕ್ಕೆ ಅವರು ಹೆಸರನ್ನು ಕೊಡದಿದ್ದ ಪಕ್ಷದಲ್ಲಿ ನಿಮ್ಮ ಹಂತದಲ್ಲಿಯೇ ಪದಾಧಿಕಾರಿಗಳ ಆಯ್ಕೆ ಮಾಡಿಕೊಂಡು ಪಟ್ಟಿ ಕೊಡಬೇಕು ಎಂದು ಸೂಚಿಸಿದರು.

ಪಕ್ಷ ಸಂಘಟನೆ ನಮ್ಮ ಅವಧಿಯಲ್ಲಿ ಚುರುಕಾಗಿದ್ದರೂ ಸಹ ಕೆಪಿಸಿಸಿ ಸಭೆಯಲ್ಲಿ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಕೆಳ ಹಂತದ ಘಟಕಗಳು ಸರಿಯಾಗಿ ಕೆಲಸ ಮಾಡಲೇಬೇಕು. ಹಿಂದೆ ಪಕ್ಷ ಹೇಗಿತ್ತು. ಈಗ ಏನಾಗಿದೆ ಎನ್ನುವುದನ್ನು ಬಿಟ್ಟು ಶಿಸ್ತಿನಿಂದ ಪಕ್ಷ ಸಂಘಟಿಸಬೇಕು. ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕ ಹೊಂದಬೇಕು. ಕೇವಲ ಚುನಾವಣೆ ನಿಲ್ಲುವುವುದು ಪಕ್ಷ ಸಂಘಟನೆಯಲ್ಲ. ಪಕ್ಷದ ಬಗ್ಗೆ ನಿರಂತರ ಜಾಗೃತಿ ಮೂಡಿಸುವುದು ಮುಖ್ಯ. ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಬರುವ ದಿನಗಳಲ್ಲಿ ಪಕ್ಷ ಸ್ಥಾನ ಕೊಡಲಿದೆ ಎಂದವರು ಸೂಚ್ಯವಾಗಿ ತಿಳಿಸಿದರು.

ಪ್ರತಿಯೊಂದು ಮುಂಚೂಣಿ ಘಟಕಗಳು ತಾವು ಮಾಡಿದ ಕೆಲಸದ ದಾಖಲೆ ಇಡಬೇಕು. ಅವುಗಳನ್ನು ಕಾಲಕಾಲಕ್ಕೆ ಪಕ್ಷದ ಸಭೆಯಲ್ಲಿ ಮಂಡಿಸಬೇಕು ಹಾಗೂ ದಾಖಲೆ ತೋರಿಸಬೇಕು. ಸೆ. 15ರೊಳಗೆ ಎಲ್ಲ ಘಟಕಗಳು ಸಕ್ರಿಯವಾಗಿ ಕೆಲಸ ಆರಂಭಿಸಬೇಕು. ಪಕ್ಷದ ಕಾರ್ಯಕರ್ತರಿಗೆ ಜಿಲ್ಲೆಯಲ್ಲಿ ಎಲ್ಲಿಯೇ ತೊಂದರೆ ಆದರೂ ಸಹ ವೇಗವಾಗಿ ಸ್ಪಂದಿಸಬೇಕು. ಮಾಧ್ಯಮ ಹಾಗೂ ಜನರ ಬಳಿ ಹೋಗಬೇಕು ಎಂದು ಸಲಹೆ ನೀಡಿದರು.

ಪಕ್ಷದ ಮುಖಂಡರಾದ ಕೆ.ರಾಜಶೇಖರ ಹಿಟ್ನಾಳ, ಕೃಷ್ಣಾ ಇಟ್ಟಂಗಿ, ಎಂ.ಪಾಷಾ ಕಾಟನ್, ಶಾಮೀದ್ ಮನಿಯಾರ್, ಬಸವರಾಜ ಉಳ್ಳಾಗಡ್ಡಿ, ಗಂಗಾಧರಸ್ವಾಮಿ ಕಲಬಾಗಿಲಮಠ, ಶರಣೇಗೌಡ ಮಾಲಿಪಾಟೀಲ್, ಕೃಷ್ಣಾ ಗಲಿಬಿ, ಟಿ.ರತ್ನಾಕರ, ಮಾಲತಿ ನಾಯಕ, ಗವಿಸಿದ್ದಪ್ಪ ಪಾಟೀಲ್, ಗುರುಬಸವರಾಜ ಹಳ್ಳಿಕೇರಿ, ಸಲೀಂ ಅಳವಂಡಿ, ನವೀನ್ ಮಾದಿನೂರ, ನಿಂಗಪ್ಪ ಕಾಳೆ, ಎಂ.ಆರ್.ವೆಂಕಟೇಶ, ಸೋಮಣ್ಣ ಬಾರಕೇರ, ಜುಲ್ಲು ಖಾದ್ರಿ ಮತ್ತು ಎಸ್.ಬಿ.ನಾಗರಳ್ಳಿ, ವಿಶ್ವನಾಥ ರಾಜು, ಮಂಜುನಾಥ ಗೊಂಡಬಾಳ ಸೇರಿದಂತೆ ವಿವಿಧ ಮೋರ್ಚಾ ಪದಾಧಿಕಾರಿಗಳು ಇದ್ದರು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ