Breaking News

ಬೆಲೆ ಏರಿಕೆ ವಿರುದ್ಧ ಸದನದ ಹೊರಗೆ, ಒಳಗೆ ಹೋರಾಟಕ್ಕೆ ಕಾಂಗ್ರೆಸ್ ಸಿದ್ದತೆ: ಡಿಕೆಶಿ

Spread the love

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಆಗುತ್ತಿದೆ. ಗ್ಯಾಸ್, ಆಟೋ ಗ್ಯಾಸ್ ದರ ಸಹಾ ಹೆಚ್ಚಳವಾಗುತ್ತಿರುವುದರ ವಿರುದ್ಧ ಕಾಂಗ್ರೆಸ್ ಹೋರಾಟ ರೂಪಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಸಂಬಂಧ ಸೆಪ್ಟಂಬರ್ 5 ಹಾಗೂ 6 ರಂದು ಪಕ್ಷದ ಮುಖಂಡರ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ಸದನದಲ್ಲೂ ಈ ವಿಚಾರ ಇಟ್ಟುಕೊಂಡು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚಾಮರಾಜನಗರದಲ್ಲಿ ನೋ ವ್ಯಾಕ್ಸಿನ್ ನೋ ರೇಷನ್, ನೋ ಪೆನ್ಷನ್ ಎನ್ನುವುದಕ್ಕೆ ಅವರೇನು ಚಕ್ರವರ್ತಿನಾ? ಲಸಿಕೆ ತಗೆದುಕೊಳ್ಳದಿದ್ದರೆ ರೇಷನ್ ಕೊಡಲ್ಲ ಎಂದರೆ ಹೇಗೆ? ಕೂಡಲೆ ಆ ಜಿಲ್ಲಾಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. ಬೇಕಾದರೆ ಅವನನ್ನ ಬಿಜೆಪಿ ಪಾರ್ಟಿ ವಕ್ತಾರ ಮಾಡಿಕೊಳ್ಳಲಿ. ನನಗೆ ಗೊತ್ತು ಅವನ ಪ್ಲಾನ್ ಏನು ಅಂತ. ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ವೈಸ್ ಚಾನ್ಸಲರ್ 6 ಗಂಟೆ ಮೇಲೆ ಓಡಾಡಬೇಡಿ ಅಂತಾರೆ. ಸರ್ಕಾರ ಆ ವೈಸ್ ಚಾನ್ಸಲರ್ ಸಸ್ಪೆಂಡ್ ಮಾಡಬೇಕು. ಮರ್ಡರ್ ಮಾಡಿ ತಪ್ಪಾಯ್ತು ಅಂದರೆ, ಕ್ಷಮಿಸಬೇಕಾ..? ಉಪಕುಲಪತಿ ಆದೇಶ ಮಾಡಿ ವಾಪಾಸ್ ಪಡೆದ ಬಗ್ಗೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ