Breaking News

ಶಾಲೆಗಳು ರೀ ಓಪನ್​​..! ಆದ್ರೆ ಬಸ್​ಗಳೇ ಇಲ್ಲ.. ನಿತ್ಯ ನಡೆಯುತ್ತಲೇ ಹೋಗಬೇಕಾಗಿದೆ ವಿದ್ಯಾರ್ಥಿಗಳು

Spread the love

ಗದಗ : ಶಿಕ್ಷಣ ಇಲಾಖೆಯೇನೋ ಹಲವಾರು ಅಡೆತಡೆಗಳ ನಡುವೆಯೂ ಶಾಲೆಗಳನ್ನು ಆರಂಭಿಸಿದೆ. ಆದರೆ ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹೋಗಬೇಕಾದ್ರೆ ನಿತ್ಯವು 4 ಕಿ.ಮೀ ನಷ್ಟು ದೂರ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಶಾಲಾ ಸಮಯಕ್ಕೆ ಸರಿಯಾದ ಬಸ್​ ಇಲ್ಲದೆ ವೇದನೆ ಅನುಭವಿಸುತ್ತಿದ್ದಾರೆ.

 

 

ಹೌದು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡ ಬಸ್ ಪುನರಾರಂಭವಾಗದ ಪರಿಣಾಮ, ವಿದ್ಯಾರ್ಥಿಗಳು ದಿನನಿತ್ಯ ಶಾಲೆಗೆ 4 ಕಿ.ಮೀ ನಡೆದುಕೊಂಡು ಹೋಗುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪುರ ಹಾಗೂ ವೆಂಕಟಾಪುರ ಗ್ರಾಮದ ವಿದ್ಯಾರ್ಥಿಗಳು, ಪಕ್ಕದ ಯಕ್ಲಾಸಪುರ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಹೋಗ ಬೇಕಾದರೆ ನಡೆದುಕೊಂಡೆ ಹೋಗುವ ಸ್ಥೀತಿ ನಿರ್ಮಾಣವಾಗಿದ್ದು ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.

ಕೋವಿಡ್​ ಕಾಲದಲ್ಲಿ ಡಂಬಳ, ಮೇವುಂಡಿ, ಹೈತಾಪುರ ಮಾರ್ಗವಾಗಿ ಯಕ್ಲಾಸಪುರಕ್ಕೆ ಸಂಚರಿಸುವ ಬಸ್​ನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಇಂದಿನವರೆಗೂ ಈ ಮಾರ್ಗದ ಬಸ್ಸನ್ನು ಪುನರಾರಂಭಿಸಿಲ್ಲ ಪರಿಣಾಮ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಕಾಲ್ನಡಿಗೆಯಲ್ಲಿಯೇ ಶಾಲೆಗೆ ಹೊರಟಿದ್ದಾರೆ.

ಸಾರಿಗೆ ಸಂಸ್ಥೆಯ ಬಸ್ ಕೊರತೆ, ಮತ್ತು ಶಾಲೆ ಸಮಯಕ್ಕೆ ಸರಿಯಾಗಿ ಬಸ್​ ಬಾರದ ಕಾರಣ ಗರಂ ಆದ ಪೋಷಕರು, ವಿದ್ಯಾರ್ಥಿಗಳು ಸಮರ್ಪಕವಾಗಿ ಬಸ್ ಬಿಡುವಂತೆ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಮಂಗಳೂರು ಏರ್ಪೋರ್ಟ್‌ನಲ್ಲಿ ಕೆ.ಸಿ.ವೇಣುಗೋಪಾಲ್ ಎದುರು ಡಿಕೆಶಿ​ ಪರ ಘೋಷಣೆ

Spread the loveಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ