Breaking News

ಸಮಾಜದಲ್ಲಿ ರೇಪ್ ಗಳು ನಡೆಯುತ್ತವೆ, ಏನೂ ಮಾಡೋಕಾಗಲ್ಲ – ಸಚಿವ ಉಮೇಶ್ ಕತ್ತಿ

Spread the love

ಚಾಮರಾಜನಗರ : ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬಂಧ, ಪೊಲೀಸರು 2 ದಿನಗಳು ಕಳೆದ್ರೂ ಆರೋಪಿಗಳನ್ನು ಪತ್ತೆ ಮಾಡಿಲ್ಲ. ಇದರ ನಡುವೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ, ಸಮಾಜದಲ್ಲಿ ರೇಪ್ ಗಳು ನಡೆಯುತ್ತವೆ. ಏನೂ ಮಾಡಲಾಗಲ್ಲ ಎಂಬುದಾಗಿ ಹೇಳುವ ಮೂಲಕ ನಾಲಿಗೆ ಹರಿ ಬಿಟ್ಟಿದ್ದಾರೆ.

 

ಚಾಮರಾಜನನಗರ ತಾಲೂಕಿನ ಕೆ.ಗುಡಿಯಲ್ಲಿ ಮಾತನಾಡಿದಂತ ಅವರು, ಮೈಸೂರು ಗ್ಯಾಂಗ್ ರೇಪ್ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಇವೆಲ್ಲವೂ ಸಮಾಜದಲ್ಲಿ ನಡೆಯುತ್ತವೆ. ನಡೆಯಬಾರದು ಆದ್ರೂ ನಡೆಯುತ್ತವೆ. ಆದ್ರೇ ಸರ್ಕಾರ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ತಾವು ಹೆಚ್ಚು ಮಾತನಾಡೋದಿಲ್ಲ. ಗೃಹ ಸಚಿವ ನಾನಲ್ಲ ಎಂದರು.

 

ಅಂದಹಾಗೇ ನಿನ್ನೆಯಷ್ಟೇ ಸಚಿವ ಉಮೇಶ್ ಕತ್ತಿಯವರು ಒಬ್ಬರಿಗೆ ಒಂದು ತಿಂಗಳಿಗೆ ಐದು ಕೆಜಿ ಅಕ್ಕಿ ಸಾಕು. ಆದ್ರೇ ಸಿದ್ದರಾಮಯ್ಯ ರಾಜಕೀಯಕ್ಕಾಗಿ 10 ಕೆಜಿ ಕೊಡಬೇಕು ಎಂಬುದಾಗಿ ಹೇಳುತ್ತಿದ್ದಾರೆ ಎಂಬುದಾಗಿ ಹೇಳಿದ್ದರು. ಈ ಮೂಲಕ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಗ್ಯಾಂಗ್ ರೇಪ್ ಸಂಬಂಧ ಉಡಾಫೆಯ ಪ್ರತಿಕ್ರಿಯೆ ನೀಡಿದ್ದಾರೆ.


Spread the love

About Laxminews 24x7

Check Also

ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿಎಂ

Spread the loveಮೈಸೂರು: ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣನವರು ಧರ್ಮದ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಎಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ