Breaking News

ಇನ್ಮುಂದೆ ವಾಟ್ಸ್ಯಾಪ್ ಮೂಲಕವೂ ಲಸಿಕೆಯ ಸ್ಲಾಟ್ ಬುಕ್ ಮಾಡಬಹುದು : ಕೇಂದ್ರ

Spread the love

ನವ ದೆಹಲಿ : ದೇಶದಾದಯಂತ ನಡೆಯುತ್ತಿರುವ ಲಸಿಕಾ ಅಭಿಯಾನಕ್ಕೆ ವೇಗ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿತ್ಯ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಮೈ ಗವರ್ನಮೆಂಟ್ ನೊಂದಿಗೆ ಸಾಮಾಜಿಕ ಜಾಲತಾಣಗಳ ದೈತ್ಯ ಸಂಸ್ಥೆಗಳಲ್ಲಿ ಒಂದಾದ ವಾಟ್ಸ್ಯಾಪ್ ಲಸಿಕಾ ಅಭಿಯಾನಕ್ಕೆ ಕೈ ಜೋಡಿಸಿದೆ. ಇನ್ಮುಂದೆ ಯಾವುದೇ ವಾಟ್ಸ್ಯಾಪ್ ಬಳಕೆದಾರರು ಲಸಿಕೆ ಪಡೆಯಲು ತಮ್ಮ ಸ್ಲಾಟ್ ಗಳನ್ನು ವಾಟ್ಸ್ಯಾಪ್ ನಲ್ಲಿಯೇ ಬುಕ್ ಮಾಡಬಹುದಾಗದೆ.

ಈ ಬಗ್ಗೆ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್ಶುಖ್ ಮಾಂಡವೀಯಾ, ಲಸಿಕಾ ಪಡೆಯುವುದಕ್ಕೆ ವಾಟ್ಸ್ಯಾಪ್ ಮೂಲಕ MyGovIndia ಕೊರೊನಾ ಹೆಲ್ಪ್ ಡೆಸ್ಕ್ ನ ಮೂಲಕವೂ ಸ್ಲಾಟ್ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ. ಮಾತ್ರವಲ್ಲದೇ, ವಾಟ್ಸ್ಯಾಪ್ ನಲ್ಲಿ ಹೇಗೆ ಸ್ಲಾಟ್ ಬುಕ್ ಮಾಡುವುದು ಎಂದು ಸಂಕ್ಷಿಪ್ತವಾಗಿ ಮಾಹಿತಿ ಕೂಡ ನೀಡಿದ್ದಾರೆ.

ಇನ್ನು,ಆರೋಗ್ಯ ಸಚಿವಾಲಯದ ಟ್ವೀಟರ್ ಖಾತೆಯ ಮೂಲಕ ಲಸಿಕಾ ಪ್ರಮಾಣ ಪತ್ರವನ್ನು ಹೇಗೆ ಪಡೆಯುವುದು ಎಂದು ಕೂಡ ಮಾಹಿತಿ ನೀಡಲಾಗಿದೆ ಪ್ರಮಾಣಪತ್ರವನ್ನು ಡೌನ್‌ ಲೋಡ್ ಮಾಡಬಯಸುವವರು ವಾಟ್ಸ್ಯಾಪ್ ನಲ್ಲಿ ‘ಕೋವಿಡ್ ಸರ್ಟಿಫಿಕೇಟ್’ ಎಂದು +91-9013151515 ವಾಟ್ಸ್ಯಾಪ್ ಸಂಖ್ಯೆಗೆ ಕಳುಹಿಸಬೇಕು. ನಂತರ ನಿಮ್ಮ ವಾಟ್ಸ್ಯಾಪ್ ನ ನಂಬರ್ ಗೆ ಕಳುಹಿಸಲಾಗುತ್ತದೆ. “ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾನ್ಯರ ಜೀವನದಲ್ಲಿ, ಇದು ಕ್ರಾಂತಿಕಾರಿ ಬೆಳವಣಿಗೆ ಎಂದು ಹೇಳಿದೆ.

ವಾಟ್ಸ್ಯಾಪ್ ನಲ್ಲಿ ಸ್ಲಾಟ್ ಬುಕ್ ಮಾಡುವುದು ಹೇಗೆ..?

*ಎಲ್ಲಕ್ಕಿಂತ ಮೊದಲು WhatsApp ನ ಅಧಿಕೃತ ಲಿಂಕ್ ಆಗಿರುವ https://wa.me/919013151515 ಮೇಲೆ ಕ್ಲಿಕ್ ಮಾಡಬೇಕು.

*ಈ ಲಿಂಕ್ ನಿಮ್ಮನ್ನು @MyGovIndia ಕೊವಿಡ್ ಹೆಲ್ಪ್ ಡೆಸ್ಕ್ ಗೆ ಕೊಂಡೊಯ್ಯಲಿದೆ.

* ಅಲ್ಲಿರುವ ‘Book Slot’/ ಬುಕ್ ಸ್ಲಾಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

*ಸ್ಲಾಟ್ ಬುಕ್ ಮಾಡಿದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ.


Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ