Breaking News

ನಾಳೆಯಿಂದ ಶಾಲೆ ಆರಂಭ: ಮಕ್ಕಳೇ ಆತಂಕಕ್ಕೆ ಒಳಗಾಗದೇ ಬನ್ನಿ, ಸಿಎಂ ಬೊಮ್ಮಾಯಿ ಕರೆ

Spread the love

ಪ್ರೀತಿಯ ವಿದ್ಯಾರ್ಥಿಗಳೇ… ಶಾಲಾ ಕಾಲೇಜುಗಳಲ್ಲಿ ಗಂಟೆ ಸದ್ದು ಮತ್ತೆ ಕೇಳಿಸಲಿದೆ. ತರಗತಿ ಕೋಣೆಯ ಕಲರವ ಸೋಮವಾರದಿಂದ ಆರಂಭವಾಗಲಿದೆ.

ಪಾಠ, ಸಹಪಾಠಿಗಳ ಭೇಟಿ, ಪಠ್ಯ, ಪಠ್ಯೇತರ ಚಟುವಟಿಕೆಗಳ ಕುರಿತು ಚರ್ಚೆ, ವಿಷಯ ವಿನಿಮಯ, ಶಾಲೆಯಲ್ಲೇ ಗುರುಗಳಿಗೆ ಪ್ರಶ್ನೆ ಕೇಳಿ ಸಂಶಯ ನಿವಾರಿಸಿಕೊಳ್ಳುವ ಮೂಲಕ ಪೂರ್ಣ ಪ್ರಮಾಣದಲ್ಲಿ ಜ್ಞಾನಾರ್ಜನೆಗೆ ಅನುಕೂಲ ವಾಗುವ ಭೌತಿಕ ತರತಿಗಳು ಆರಂಭವಾಗುತ್ತಿವೆ.

ನಿಮ್ಮೆಲ್ಲರ ಆರೋಗ್ಯದ ಸುರಕ್ಷೆಯೇ ನಮ್ಮ ಆದ್ಯತೆ. ಹೀಗಾಗಿ ಕ್ಯಾಂಪಸ್‌ ದಿನಗಳು ಮರಳಿ ದರೂ ಹಿಂದಿನಂತಿರುವುದಿಲ್ಲ. ಏಕೆಂದರೆ ಕೋವಿಡ್‌ ವಿರುದ್ಧ ಹೋರಾಟ ಮುಗಿದಿಲ್ಲ. ಆದರೆ ಶಿಕ್ಷಣ ಮುಂದುವರಿಯಬೇಕು.

ಅದಕ್ಕಾಗಿ ನೀವು ಮನೆಯಿಂದ ಹೊರಗೆ ಕಾಲಿಡುವಾಗ 3 ವಿಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮನೆಯಿಂದಲೇ ಸರಿಯಾಗಿ ಮಾಸ್ಕ್ ಧರಿಸಿ ಹೊರಡಿ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಕೈಗಳನ್ನು ಆಗಾಗ ತೊಳೆಯುತ್ತಿರಿ ಅಥವಾ ಸ್ಯಾನಿಟೈಸ್‌ ಮಾಡಿಕೊಳ್ಳಿ. ಈ 3 ನಿಯಮಗಳನ್ನು ಪಾಲಿಸುವುದರಿಂದ ನೀವೂ ಕೋವಿಡ್‌ ಸೇನಾನಿ ಆಗುವ ಜತೆಗೆ ಕೊರೊನಾದಿಂದ ದೂರವಿರಲು ಸಾಧ್ಯವಿದೆ.

ಕೋವಿಡ್‌-19 ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹೆತ್ತವರು ಅಥವಾ ಶಿಕ್ಷಕರ ಗಮನಕ್ಕೆ ತನ್ನಿ. ಯಾವುದೇ ರೀತಿಯಲ್ಲೂ ಆತಂಕ ಅಥವಾ ಭಯ ಬೇಡ. ಶಾಲೆಯಲ್ಲಿ ಕೋವಿಡ್‌ ಲಕ್ಷಣ ಕಂಡುಬಂದಲ್ಲಿ, ಅದಕ್ಕಾಗಿ ಪ್ರತ್ಯೇಕ ಕೊಠಡಿ ಇರಲಿದೆ. ಅಲ್ಲಿ ಪ್ರಾಥಮಿಕ ಆರೈಕೆಯ ಜತೆಗೆ ಸ್ಥಳೀಯ ಆರೋಗ್ಯ ಕೇಂದ್ರಕ್ಕೂ ಮಾಹಿತಿ ನೀಡಲಾಗುತ್ತದೆ. ಮನೆಯಲ್ಲಿ ಕೊರೊನಾ ಲಕ್ಷಣ ಕಂಡುಬಂದರೆ ಹೆತ್ತವರಿಗೆ ತಿಳಿಸಬೇಕು.

ಆರೋಗ್ಯದ ಜತೆಗೆ ಕಲಿಕೆಯೂ ಅತೀ ಮುಖ್ಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು, ಬೋಧಕರ ಆರೋಗ್ಯ ಗಮನದಲ್ಲಿ ಇರಿಸಿಕೊಂಡು ತಜ್ಞರ ಸಲಹೆಯಂತೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಗುಂಪುಗಳ ರಚನೆಯನ್ನು ಮಾಡಲಾಗಿದೆ. ಆನ್‌ಲೈನ್‌, ಪರ್ಯಾಯ ಮಾರ್ಗದಲ್ಲಿ ತರಗತಿಗಳು ಮುಂದುವರಿಯಲಿವೆ.

ಕಲಿಕೆಗೆ ಬೇಕಾದ ಎಲ್ಲ ರೀತಿಯ ಸುರಕ್ಷ ಕ್ರಮಗಳನ್ನು ಕೈಗೊಂಡಿದ್ದೇವೆ. ಬಹುತೇಕ ಎಲ್ಲ ಶಿಕ್ಷಕರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಅವರು ಮಾಸ್ಕ್ ಸರಿಯಾಗಿ ಧರಿಸಿದ್ದಾರೆಯೇ ಎಂಬುದನ್ನು ಗಮನಿಸುವ ಜತೆಗೆ ಮನೆಯಿಂದಲೇ ಬಿಸಿನೀರು ಹಾಗೂ ಲಘು ಉಪಾಹಾರ ನೀಡುವುದು ಉತ್ತಮ.

ಮಕ್ಕಳು ಆತಂಕಕ್ಕೆ ಒಳಗಾಗದೆ ಸೋಮವಾರದಿಂದ ಶಾಲೆಗಳಿಗೆ ಹಾಜರಾಗಿ. ಸೋಮವಾರ ಬೆಳಗ್ಗೆ ಶಿಕ್ಷಣ ಸಚಿವರೊಂದಿಗೆ ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ. ಮಕ್ಕಳು ಶಾಲೆಗೆ ಬರಬೇಕು, ಕಲಿಕೆ ನಡೆಯಬೇಕು, ಜತೆಗೆ ಕೋವಿಡ್‌ ಸುರಕ್ಷೆಯೂ ಇರಬೇಕು. -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ


Spread the love

About Laxminews 24x7

Check Also

ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ: ೧೬ ಪ್ರಕರಣ ದಾಖಲು

Spread the love ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ: ೧೬ ಪ್ರಕರಣ ದಾಖಲು ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ