ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾದ ನಂತರ ಬೆಳ್ಳಿತೆರೆಯಿಂದ ದೂರ ಉಳಿದುಕೊಂಡಿರುವ ರಕ್ಷಿತಾ ನಿರ್ಮಾಪಕಿಯಾಗಿ ವೀಕ್ಷಕರಿಗೆ ಹತ್ತಿರವಾಗಿದ್ದಾರೆ.

ಕಿರುತೆರೆಯಲ್ಲಿ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ತೀರ್ಫುಗಾರರಾಗಿರುವ ರಕ್ಷಿತಾ ತಮ್ಮ ಸಹೋದರ ರಾಣಾಗಾಗಿ ಸಿನಿಮಾ ನಿರ್ಮಿಸುತ್ತಿರುವ ವಿಷಯ ಗೊತ್ತೇ ಇದೆ.

ರಾಣಾ ನಾಯಕನಾಗಿ ಅಭಿನಯಿಸುತ್ತಿರುವ ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣ ಈಗ ಪೂರ್ಣಗೊಂಡಿದೆ.

ಸಿನಿಮಾದ ಕೊನೆಯ ದಿನದ ಚಿತ್ರೀಕರಣ ಮುಗಿದೆ ಎಂದು ರಕ್ಷಿತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಕೊನೆಯ ದಿನದ ಚಿತ್ರೀಕರಣ ಮುತ್ತತ್ತಿಯಲ್ಲಿ ನಡೆದಿದೆ.

ಚಿತ್ರೀಕರಣವನ್ನು ಕೊನೆಗೊಳಿಸುವ ಮುನ್ನ ಅಲ್ಲೇ ಇದ್ದ ಹನುಮಂತನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಸಿನಿಮಾದ ಕೊನೆಯ ದಿನದ ಸೆಟ್ನಲ್ಲಿ ತೆಗೆದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇಡೀ ಏಕ್ ಲವ್ ಯಾ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ ರಕ್ಷಿತಾ ಪ್ರೇಮ್.

ಮುತ್ತತ್ತಿಯಲ್ಲಿ ಏಕ್ ಲವ್ ಯಾ ಚಿತ್ರತಂಡ.