ಬಾಗಲಕೋಟೆ: ಬಿಜೆಪಿಯಲ್ಲಿ ಖಾತೆ ಹಂಚಿಕೆ ಕ್ಯಾತೆ ಆರಂಭವಾಗಿರುವಾಗಲೇ ಇದೀಗ ಸಚಿವ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದು, ಇದೇ ಅವಧಿಯಲ್ಲಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಉಮೇಶ್ ಕತ್ತಿ, ಬರುವ ಅವಧಿಯಲ್ಲಿ ನಾನೂ ಕೂಡ ಸಿಎಂ ಆಗಬಹುದು. ಅದು ಕೂಡ ಇದೇ ಅವಧಿಯಲ್ಲಿ ಆಗುತ್ತೇನೆ. ನಾನೂ ಹಿರಿಯನಿದ್ದೇನೆ. ಸಾಕಷ್ಟು ರಾಜಕೀಯ ಅನುಭವಗಳಿವೆ. ಹಾಗಾಗಿ ಜೀವಂತ ಇದ್ದರೆ ಇದೇ ಅವಧಿಯಲ್ಲಿ ಸಿಎಂ ಆಗ್ತೇನೆ. ಸತ್ತರೆ ಮುಂದಿನ ಅವಧಿಯಲ್ಲಿ ಆಗಬಹುದು ಎಂದು ನಗುತ್ತಲೇ ಸಿಎಂ ಪಟ್ಟದ ಆಸೆಯನ್ನು ಮತ್ತೆ ತೇಲಿಬಿಟ್ಟಿದ್ದಾರೆ.
ಇದೇ ವೇಳೆ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ವಿಚಾರವಾಗಿಯೂ ಮಾತನಾಡಿದ ಸಚಿವರು, ಈ ಬಗ್ಗೆ ಜನರ ಮುಂದೆ ಚರ್ಚೆಯಾಗಬೇಕು. ಇಂದಿರಾ ಕ್ಯಾಂಟೀನ್ ಬದಲು ಅನ್ನಪೂರ್ಣ ಕ್ಯಾಂಟೀನ್ ಎಂದು ಹೆಸರು ಇಡುವ ಬಗ್ಗೆ ಜನ ತೀರ್ಮಾನಿಸಲಿ. ಜನರು ಹೇಗೆ ಹೇಳುತ್ತಾರೆ ಹಾಗೆ ಮಾಡುವುದು ಉತ್ತಮ ಎಂದರು.
Laxmi News 24×7