ತುಮಕೂರು,ಆ.9-ನನಗೆ ಕೊಟ್ಟಿರಿವ ತೋಟಗಾರಿಕೆ ಖಾತೆ ತೃಪ್ತಿ ತಂದಿದೆ, ಬೇರೆ ಪಕ್ಷದಿಂದ ಬಿಜೆಪಿಗೆ ಬಂದು ಸಚಿವನಾಗಿದ್ದೇನೆ ಎಂದು ಮುನಿರತ್ನ ತಿಳಿಸಿದ್ದಾರೆ. ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸಿದ್ದಲಿಂಗ ಸ್ವಾಮೀಜಿಗಳ ಆಶಿರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅನ್ಯ ಪಕ್ಷದಿಂದ ಬಿಜೆಪಿಗೆ ಬಂದು ನಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ.
ಪಕ್ಷದ ವರಿಷ್ಠರು ನಮಗೆ ಜವಾಬ್ದಾರಿ ನೀಡಿದ್ದಾ. ಅದನ್ನು ನಿಬಾಯಿಸೋಣ. ಅದನ್ನು ಬಿಟ್ಟು ನನಗೆ ಇಂತಹದ್ದ ಖಾತೆ ಬೇಕು ಎಂದು ಕೇಳ ಬಾರದು ಎಂದಿದ್ದಾರೆ. ಪಕ್ಷ ಏನು ಮಾಡಿದೆ ಅನ್ನುವ ಬದಲು ಪಕ್ಷಕ್ಕೆ ಏನು ಮಾಡಿದ್ದೇವೆ ಎಂಬ ಅತ್ಮಾವಲೋಕನ ಮಾಡಿ ಕೊಳ್ಳಬೇಕು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಿ ತೋರಿಸ ಬೇಕು ಎಂದು ಮುನಿರತ್ನ ತಿಳಿಸಿದ್ದಾರೆ. ಶಾಸಕ ಜಿ.ಬಿ.ಜ್ಯೋತಿ ಗಣೇಶ್,ಆರ್. ರಘು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Laxmi News 24×7