Breaking News

ಸಾರ್ವಜನಿಕ ಗಣೇಶೋತ್ಸವ ರದ್ದು ಮಾಡಬೇಡಿ

Spread the love

ಭಕ್ತಿ ಹಾಗೂ ಭಾವೈಕ್ಯತೆ ಹಿನ್ನೆಲೆಯಲ್ಲಿ ಬಾಲ ಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಸಾರ್ವಜನಿಕ ಗಣೇಶೋತ್ಸವ ಎಲ್ಲರ ಅಚ್ಚುಮೆಚ್ಚಿನ ಹಬ್ಬ. ಅಲ್ಲದೆ ಅದು ಶ್ರದ್ಧಾ ಭಾವನೆಗಳ ಜೊತೆಗೆ ಸಾಮಾಜಿಕ ಸುಧಾರಣೆಯ ಅಭಿಯಾನವೂ ಆಗಿದೆ. ದೇಶದಾದ್ಯಂತ ಅನೇಕ ಕಲಾವಿದರೂ, ಉದ್ಯಮ ರಂಗದವರೂ ಈ ಉತ್ಸವದ ಮೇಲೆ ಅವಲಂಬಿತರಾಗಿದ್ದಾರೆ. ಉದಯೋನ್ಮುಖ ಕಲಾವಿದರಿಗೆ ಪ್ರತಿಭೆ ಪ್ರದರ್ಶಿಸಲು ಈ ಉತ್ಸವವು ವೇದಿಕೆಯಾಗಿದೆ. ಕರೊನಾದಿಂದಾಗಿ ಈಗಾಗಲೇ ಹಲವಾರು ಉದ್ಯಮಗಳು ನೆಲಕಚ್ಚಿವೆ. ಕರೊನಾ ಸೋಂಕಿನ ಮೂರನೇ ಅಲೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಯಾವ ರೀತಿಯ ಮಾರ್ಗಸೂಚಿ ರೂಪಿಸಬಹುದೆಂಬ ಬಗ್ಗೆ ಜನರಲ್ಲಿ ಕಲ್ಪನೆ ಇಲ್ಲ.ಸಾರ್ವಜನಿಕ ಗಣೇಶೋತ್ಸವಕ್ಕೆ ಅದರದೇ ಆದ ಪ್ರಾಮುಖ್ಯ, ಪ್ರಾಧಾನ್ಯ, ಐತಿಹಾಸಿಕ ಹೊಳಪಿದೆ.

ಈ ಹಬ್ಬವನ್ನು ನಂಬಿದ ವಿವಿಧ ವೃತ್ತಿಯ ಕುಶಲಕರ್ವಿುಗಳು, ಕಲಾವಿದರು, ವ್ಯಾಪಾರಸ್ಥರು ಮತ್ತು ಜನರ ಧಾರ್ವಿುಕ ಭಾವನೆಗಳಿಗೆ ಮನ್ನಣೆ ಕೊಡುವ ದೃಷ್ಟಿಯಿಂದ ಸಾರ್ವಜನಿಕ ಗಣೇಶೋತ್ಸವವನ್ನು ಸೀಮಿತ ಪ್ರಮಾಣದಲ್ಲಾದರೂ ಆಚರಿಸಲು ಅವಕಾಶ ನೀಡುವುದು ಒಳ್ಳೆಯದು. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಗಣೇಶೋತ್ಸವ ಆಚರಿಸುವಂತಾಗಲಿ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ