Breaking News

ಬ್ಲ್ಯಾಕ್ ಮೇಲ್ ಮಾಡಿ ಬೊಮ್ಮಾಯಿ ಸಿಎಂ ಮಾಡಿದ್ದಾರೆ : ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಹೊಸ ಬಾಂಬ್.!

Spread the love

ವಿಜಯಪುರ : ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದೇ ಬ್ಲಾಕ್ ಮೇಲ್ ಮೂಲಕವಾಗಿದೆ. ಬೇರೆ ಯಾರನ್ನೇ ಸಿಎಂ ಮಾಡಿದ್ರೇ.. ಸರ್ಕಾರವನ್ನು ಬೀಳಿಸುತ್ತೇನೆ ಎಂಬುದಾಗಿ ಹೆದರಿಸಿಯೇ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿರೋದು. ಸಿಎಂ ಪಟ್ಟಿಯಲ್ಲಿ ಹೆಸರು ಇದ್ದಿದ್ದೇ ನನ್ನದು ಎಂಬುದಾಗಿ ಶಾಸಕ ಬಸವನಗೌಡ ಪಾಟೀಲ್ ಬಿಗ್ ಬಾಂಬ್ ಸಿಡಿಸಿದ್ದಾರೆ.

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಡಿಯೂರಪ್ಪ ಅವರೇ ನಾನು ಸಿಎಂ ಆಗೋದನ್ನು ತಪ್ಪಿಸಿದ್ದು. ಇದಕ್ಕೆ ಕಾರಣ ಎಲ್ಲಿ ಯಡಿಯೂರಪ್ಪ ಅವರ ಹಗರಣಗಳು ಹೊರಗೆ ಬರ್ತಾವೋ ಎನ್ನುವಂತ ಭಯದಿಂದ ಆಗಿದೆ. ರಾಜ್ಯದಲ್ಲಿ 10 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರವನ್ನು ಯಡಿಯೂರಪ್ಪ ಮಾಡಿದ್ದಾರೆ ಎಂಬುದಾಗಿ ವಾಗ್ದಾಳಿ ನಡೆಸಿದರು.

ಯತ್ನಾಳ್ ಸಿಎಂ ಆದ್ರೇ ಯಡಿಯೂರಪ್ಪಗೆ ಜೈಲಿಗೆ ಹೋಗೋ ಭಯವಿತ್ತು. ಇದೇ ಕಾರಣದ್ದಾಗಿಯೇ ಧರ್ಮೇಂದ್ರ ಪ್ರಧಾನ್ ಅವರನ್ನು ಬಸವರಾಜ ಬೊಮ್ಮಾಯಿ ಹೊರತಾಗಿ ಯಾರನ್ನೇ ಸಿಎಂ ಮಾಡಿದ್ರೇ ಸರ್ಕಾರ ಬೀಳಿಸೋದಾಗಿ ಬ್ಲಾಕ್ ಮೇಲ್ ಮಾಡಿ, ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. ಆದ್ರೇ.. ನೋಡ್ತಾ ಇರಿ.. ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪನವರನ್ನು ದೂರ ಇಡುತ್ತಾರೆ ಎಂಬುದಾಗಿ ಹೇಳಿದರು.

ಇವೆಲ್ಲಾ ಹೆಚ್ಚು ದಿನ ನಡೆಯೋದಿಲ್ಲ. ವಿಜಯಪುರದ ಅಭಿವೃದ್ಧಿಯ 125 ಕೋಟಿ ಕಿತ್ತುಕೊಂಡವರು. ಮೋದಿ, ಅಮಿತ್ ಶಾ ಟ್ವಿಟ್ಟರ್ ಮಾಡಿದ್ದರ ಅರ್ಥ, ಸೈಕಲ್ ತುಳಿದು ಪಕ್ಷ ಕಟ್ಟಿದ್ದೀರಿ. ಈಗ ನಿಮ್ಮ ಸೇವೆ ಸಾಕು, ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳನ್ನು ಹಾಡಿಸಿಕೊಂಡು ಕುಳಿತುಕೊಳ್ಳಿ ಹೋಗಿ ಎಂದು ಹೇಳಿರೋದು. ನಾನು ಸಿಎಂ ಆಗಿದ್ದರೇ.. 150 ಸೀಟ್ ಗೆಲ್ಲುತ್ತಿದ್ದೆ. ಯಡಿಯೂರಪ್ಪಗೆ ಜೈಲಿಗೆ ಹೋಗೋ ಭಯ ಹುಟ್ಟಿತ್ತು. ಹೀಗಾಗಿಯೇ ನನ್ನನ್ನು ಬಿಜೆಪಿ ಹೈಕಮಾಂಡ್ ಸಿಎಂ ಮಾಡೋದನ್ನು ತಪ್ಪಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ ಯಡಿಯೂರಪ್ಪ ಮಾಡಿದ್ರು ಎಂಬುದಾಗಿ ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ