ವಿಶಾಖಪಟ್ಟಣ: ಮಳೆಗೆ ತುಂಬಿ ಹರಿಯುತಿದ್ದ ಹೊಳೆಯೊಳಗೆ ಜಾರಿ ಬಿದ್ದು ನಾಲ್ವರು ಮಕ್ಕಳು ದುರಂತ ಸಾವಿಗೀಡಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ವಿಶಾಖಪಟ್ಟಣ ಜಿಲ್ಲೆಯ ವಿ. ಮಡುಗುಲಾ ಮಂಡಲ್ ಜಮ್ಮದೇವಿಪೇಟಾ ಗ್ರಾಮದಲ್ಲಿ ಘಟನೆ ನಡೆದಿದ್ದು ಮೃತ ಮಕ್ಕಳನ್ನು ಜಾಹ್ನವಿ (11) ಝಾನ್ಸಿ (8), ಶರ್ಮಿಳಾ (7) ಮತ್ತು ಮಹೀಂದರ್ (7) ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯಾಹ್ನ ಪಾಲಕರು ಬಟ್ಟೆ ಹೊಗೆಯಲು ಹೋಗಿದ್ದರು. ಮಕ್ಕಳು ಸಹ ಜತೆಯಲ್ಲಿ ತೆರಳಿದ್ದರು. ಈ ವೇಳೆ ನೀರಿನ ಹಳ್ಳವನ್ನು ದಾಟುವಾಗ ಆಕಸ್ಮಿಕವಾಗಿ ಹಳ್ಳದ ಒಳಗೆ ಬಿದ್ದು ನೀರಿನಲ್ಲಿ ಮುಳುಗಿ ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳ ಸಾವಿನಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
Laxmi News 24×7