Breaking News

ಬೆಳಗಾವಿಯಲ್ಲಿ ತಗ್ಗಿದ ಮಳೆ ಆರ್ಭಟ : ಕೊಂಚ ನಿಟ್ಟುಸಿರು ಬಿಟ್ಟ ನಿರಾಶ್ರಿತರು

Spread the love

ಬೆಳಗಾವಿ :ನೆರೆಯ ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶಗಳನ್ನು ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯ ಅರ್ಭಟ ಅಲ್ಪಮಟ್ಟದಲ್ಲಿ ಕಡಿಯಾಗಿರುವ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ 2 ಅಡಿ ಇಳಿಮುಖವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಮನೆ, ಆಸ್ತಿ, ಗೃಹಪಯೋಗಿ ವಸ್ತುಗಳನ್ನು ಕಳೆಕೊಂಡಿದ್ದ ನಿರಾಶ್ರಿತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಒಂದು ವಾರದಿಂದ ನೆರೆಯ ಮಹಾರಾಷ್ಟ್ರದಲ್ಲಿ ಹಾಗೂ ಜಿಲ್ಲೆಯ ಗಡಿ ಭಾಗದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಹಿರಣ್ಯಕೇಶಿ‌ ನದಿಗೆ ಪ್ರವಾಹ ಉಂಟಾಗಿ ಸಂಕೇಶ್ವರ ನಗರವು ಅರ್ಧದಷ್ಟು ಜಲಾವೃತ ವಾಗಿ ಹಳೆ ಸಂಕೇಶ್ವರ ನಗರವು ನಡುಗಡ್ಡೆಯಂತಾಗಿ ಪರಿವರ್ತನೆ ಗೊಂಡಿತ್ತು. ಹಲವಾರು ಕುಟುಂಬಗಳು ಈ ಜಲ ಪ್ರವಾಹಕ್ಕೆ ತುತ್ತಾಗಿ ತಮ್ಮ ಮನೆ, ಆಸ್ತಿ, ಗೃಹಪಯೋಗಿ ಸಾಮಗ್ರಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿ ಕಾಳಜಿ ಕೇಂದ್ರಗಳಲ್ಲಿ ಸೇರಿಕೊಂಡಿದ್ದರು.

ಸಂಕೇಶ್ವರದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಸುಮಾರು ಅಡಿಗಳಷ್ಟು ನೀರಿನ ಸೆಳೆತ ಉಂಟಾಗುವ ಮೂಲಕ ಅದರಲ್ಲಿ ಲಾರಿಯೊಂದು ಚಾಲಕ ಸಮೇತ ಮುಳಗಿತ್ತು. ಆದರೆ ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಅಧಿಕಾರಿಗಳ ಪ್ರಯತ್ನದಿಂದ ಲಾರಿಯ ಟಪ್ಪ ಮೇಲೆರಿ ರಕ್ಚಣೆ ಮಾಡುವಂತೆ ಮನವಿ ಮಾಡುತ್ತಿದ್ದ ಚಾಲಕನನ್ನು ರಕ್ಷಣೆ ಮಾಡಲಾಗಿದೆ. ಅದರಂತೆ ಶನಿವಾರ ಬೆಳಿಗಿನ ಜಾವು ಎಸ್.ಡಿ.ಆರ್.ಎಫ್ ತಂಡವು ಸಂಕೇಶ್ವರಕ್ಕೆ ಆಗಮಿಸಿ ನಡುಗಡ್ಡೆಯಂತ್ತಿದ್ದ ಹಳೆ ಸಂಕೇಶ್ವರದಲ್ಲಿ ಸಿಲುಕಿಕೊಂಡಿದ್ದ ಕೆಲವು ನಿರಾಶ್ರಿತರನ್ನು ಹೊರತರಲಾಗಿದೆ.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the love ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ