ಧಾರವಾಡ: ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಮತ್ತು ಹೈಕಮಾಂಡ ನಾಯಕರ ಮಧ್ಯೆ ಯಾವುದೊ ಮಾತುಕತೆ ನಡೆದಿರಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿಚಾರಗಳನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಬಿ.ಎಸ್.ಯಡಿಯೂರಪ್ಪ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆ ಆದರಿಸಿ ನಾನು ಹೇಳುವುದಾದರೆ, ಬಿಎಸ್ವೈ ಮತ್ತು ಬಿಜೆಪಿ ಹೈಕಮಾಂಡ ಮಧ್ಯ ಏನೋ ಮಾತುಕತೆ ನಡೆದಿರಬಹುದು. ಆದರೆ ಅದು ಏನು ಎಂಬುದು ನನಗೂ ಸಹ ಗೊತ್ತಿಲ್ಲ. ಆ ಯಾವುದೇ ಚರ್ಚೆಯಲ್ಲಿ ನಾನಿಲ್ಲ. ಮುಖ್ಯಮಂತ್ರಿ ರೇಸ್‌ನಲ್ಲಿ ನನ್ನ ಹೆಸರಿರುವುದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ ಎಂದರು.
ನೀವು ಕೇಂದ್ರ ಹೇಳಿದರೆ ಸಿಎಂ ಹುದ್ದೆ ಒಪ್ಪಿಕೊಳ್ಳುತ್ತೀರಾ ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜೋಶಿ, ನಾನು ಕಾಲ್ಪನಿಕ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎಂದು ಹೇಳಿದರು.
Laxmi News 24×7