Breaking News

ಜೈ ಭೀಮ್​’ ಎನ್ನುತ್ತ ಕರ್ನಾಟಕದಲ್ಲೂ ಸದ್ದು ಮಾಡಲು ಸಜ್ಜಾದ ತಮಿಳು ಸ್ಟಾರ್​ ನಟ ಸೂರ್ಯ

Spread the love

ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ (Suriya) ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಮನಸೆಳೆಯುವ ಸಿನಿಮಾಗಳ ಮೂಲಕ ಅವರು ದೇಶಾದ್ಯಂತ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ‘ಸೂರರೈ ಪೋಟ್ರು’ (Soorarai Pottru) ಸಿನಿಮಾ ಮೂಲಕ ಅವರು ಕನ್ನಡದ ಸಿನಿಪ್ರಿಯರಿಗೆ ಹೆಚ್ಚು ಹತ್ತಿರ ಆಗಿದ್ದರು. ಈಗ ‘ಜೈ ಭೀಮ್​’ (Jai Bheem) ಎನ್ನುತ್ತ ಮತ್ತೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಏನಿದು ‘ಜೈ ಭೀಮ್’​? ಅವರ ಹೊಸ ಸಿನಿಮಾದ ಶೀರ್ಷಿಕೆ. ಹೌದು, ಸೂರ್ಯ ನಟಿಸಲಿರುವ ಹೊಸ ಚಿತ್ರಕ್ಕೆ ಈ ರೀತಿಯ ಪವರ್​ಫುಲ್​ ಟೈಟಲ್​ ಇಡಲಾಗಿದೆ. ಇದು ಅಭಿಮಾನಿಗಳಲ್ಲಿ ಭಾರಿ ಕೌತುಕ ಮೂಡಿಸಿದೆ.

‘ಜೈ ಭೀಮ್​’ ಮೂಲ ತಮಿಳಿನ ಸಿನಿಮಾ ಆದರೂ ಸಹ ಕನ್ನಡದಲ್ಲೂ ರಿಲೀಸ್​ ಆಗಲಿದೆ. ಹಾಗಾಗಿ ಕನ್ನಡದಲ್ಲೂ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಹೆಸರೇ ಸೂಚಿಸುವಂತೆ ಇದರಲ್ಲಿ ಜಾತಿ ತಾರತಮ್ಯಕ್ಕೆ ಸೇರಿದ ವಿಷಯ ಇರಬಹುದು ಎಂದು ಸಿನಿಪ್ರಿಯರು ಊಹಿಸುತ್ತಿದ್ದಾರೆ. ಆದರೆ ಸಿನಿಮಾದ ಕಥೆಯ ಬಗ್ಗೆ ಚಿತ್ರತಂಡದಿಂದ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ.

ಫಸ್ಟ್​ಲುಕ್​ ಪೋಸ್ಟರ್​ನಲ್ಲಿ ಸೂರ್ಯ ಅವರ ಗೆಟಪ್​ ಗಮನ ಸೆಳೆಯುತ್ತಿದೆ. ಕಪ್ಪು ಕೋಟು ಧರಿಸಿ, ವಕೀಲನ ಲುಕ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಪೋಸ್ಟರ್​ನ ಹಿನ್ನೆಲೆಯಲ್ಲಿ ನ್ಯಾಯಾಲಯ ಕಟ್ಟಡ, ಮುನ್ನೆಲೆಯಲ್ಲಿ ಬುಡಕಟ್ಟು ಜನರು ಹೈಲೈಟ್​ ಆಗಿರುವುದರಿಂದ ಸಿನಿಮಾದ ಕಥೆ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇದು ಸೂರ್ಯ ನಟಿಸುತ್ತಿರುವ 39ನೇ ಸಿನಿಮಾ. ಜು.23ರಂದು ಸೂರ್ಯ ಜನ್ಮದಿನ. ಆ ಪ್ರಯುಕ್ತ ಶೀರ್ಷಿಕೆ ಮತ್ತು ಫಸ್ಟ್​ಲುಕ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಗಿಫ್ಟ್​ ನೀಡಲಾಗಿದೆ. ಈ ಚಿತ್ರಕ್ಕೆ ಜ್ಞಾನವೇಲ್​ ನಿರ್ದೇಶನ ಮಾಡಲಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ