Breaking News

‘ಮರಳಿ ಬಂದಿದೆ ಸುವರ್ಣ ಯುಗ’: ಮಣಿರತ್ನಂ ಚಿತ್ರದ ಬಗ್ಗೆ ಐಶ್ವರ್ಯ ರೈ ಸಂತಸ

Spread the love

ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಪೊನ್ನಿಯನ್ ಸೆಲ್ವನ್’ ಸಿನಿಮಾದ ಪೋಸ್ಟರ್‌ನ್ನು ಮೊದಲ ಬಾರಿಗೆ ನಟಿ ಐಶ್ವರ್ಯ ರೈ ಬಚ್ಚನ್ ತಮ್ಮ ಇನ್ಸ್ಟಾಗ್ರಾಂ ಹಂಚಿಕೊಂಡಿದ್ದಾರೆ.

ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯ ನಟಿಸುತ್ತಿದ್ದಾರೆ ಎಂದು ತಿಳಿದಿತ್ತು. ಆದರೆ, ಇದುವರೆಗೂ ಸಿನಿಮಾಗೆ ಸಂಬಂಧಪಟ್ಟ ಯಾವ ಪೋಸ್ಟರ್ ಸಹ ನಟಿ ಶೇರ್ ಮಾಡಿರಲಿಲ್ಲ. ಇದೀಗ, ಮೊದಲ ಪೋಸ್ಟರ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ”ಜೀವನದಲ್ಲಿ ಸುವರ್ಣ ಯುಗ ಬರುತ್ತದೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಕೊರೊನಾ ಲಾಕ್‌ಡೌನ್ ಕಾರಣದಿಂದ ಬ್ರೇಕ್ ತೆಗೆದುಕೊಂಡಿದ್ದ ಮಣಿರತ್ನಂ ಶೂಟಿಂಗ್‌ಗೆ ಮರುಚಾಲನೆ ಕೊಟ್ಟಿದ್ದಾರೆ. ಇಂದಿನಿಂದ (ಜುಲೈ 20) ಪಾಂಡಿಚೆರಿಯಲ್ಲಿ ಕೊನೆಯ ಹಂತದ ಚಿತ್ರೀಕರಣ ಶುರುವಾಗಿದೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಅದಾಗಲೇ ಪಾಂಡಿಚೆರಿ ತಲುಪಿದ್ದರು. ಐಶ್ವರ್ಯ ಪಾಂಡಿಚೆರಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್ ಆಗಿತ್ತು.

ಕೊನೆಯ ಶೆಡ್ಯೂಲ್‌ನಲ್ಲಿ ತಮಿಳು ನಟ ಜಯಂ ರವಿ, ಕಾರ್ತಿ, ವಿಕ್ರಂ ಸಹ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದ ಜನವರಿ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಪೊನ್ನಿಯನ್ ಸೆಲ್ವನ್ ಶೂಟಿಂಗ್ ನಡೆದಿತ್ತು. ಅದಾದ ಬಳಿಕ ಲಾಕ್‌ಡೌನ್ ಹಿನ್ನೆಲೆ ಅಲ್ಪವಿರಾಮ ತೆಗೆದುಕೊಂಡಿದ್ದರು.

ಅಂದ್ಹಾಗೆ, ಪೊನ್ನಿಯನ್ ಸೆಲ್ವನ್ ಚಿತ್ರವನ್ನು ಎರಡು ಭಾಗಗಳಲ್ಲಿ ತಯಾರಿಸುತ್ತಿದ್ದು, ಮೊದಲ ಭಾಗ 2022ರ ಸಮ್ಮರ್‌ನಲ್ಲಿ ತೆರೆಗೆ ಬರಬಹುದು. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದು, ಲೈಕಾ ಪ್ರೊಡಕ್ಷನ್ ಬಂಡವಾಳ ಹಾಕಿದ್ದಾರೆ.

ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಬಹುದೊಡ್ಡ ತಾರಬಳಗ ಇದೆ. ಚಿತ್ರದ ಪ್ರಧಾನ ಪಾತ್ರದಲ್ಲಿ ತ್ರಿಷಾ ನಟಿಸಿದ್ದಾರೆ. ಐಶ್ವರ್ಯ ರೈ ಬಚ್ಚನ್, ಅಮಿತಾಭ್ ಬಚ್ಚನ್, ವಿಕ್ರಂ, ವಿಕ್ರಂ ಪ್ರಭು, ಜಯ ರವಿ, ಐಶ್ವರ್ಯ ಲಕ್ಷ್ಮಿ, ಕಿಶೋರ್, ಸಾರಾ ಅರ್ಜುನ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟರು ಇರಲಿದ್ದಾರೆ.

2007ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಬಂದಿದ್ದ ‘ಗುರು’ ಚಿತ್ರದಲ್ಲಿ ಐಶ್ವರ್ಯ ನಟಿಸಿದ್ದರು. 2010ರಲ್ಲಿ ‘ರಾವಣ್’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಈ ಎರಡು ಚಿತ್ರಗಳಲ್ಲಿಯೂ ಅಭಿಷೇಕ್ ಬಚ್ಚನ್ ಅಭಿನಯಿಸಿದ್ದರು.

2018ರಲ್ಲಿ ರಿಲೀಸ್ ಆಗಿದ್ದ ‘ಫೆನ್ನಿ ಖಾನ್’ ಸಿನಿಮಾದಲ್ಲಿ ಐಶ್ವರ್ಯ ಕೊನೆಯದಾಗಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅನಿಲ್ ಕಪೂರ್. ರಾಜ್ ಕುಮಾರ್ ರಾವ್ ನಟಿಸಿದ್ದರು. ಅಭಿಷೇಕ್ ಬಚ್ಚನ್ ನಟಿಸಲಿರುವ ‘ಗುಲಾಬ್ ಜಾಮೂನ್’ ಚಿತ್ರದಲ್ಲಿ ಐಶ್ವರ್ಯ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ಮಿಸಲಿದ್ದಾರೆ.


Spread the love

About Laxminews 24x7

Check Also

ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ

Spread the love ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ ಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ