Breaking News

JIO: ಜಿಯೋದ ಕೇವಲ 98 ರೂ. ರಿಚಾರ್ಜ್ ಪ್ಲಾನ್​ನಲ್ಲಿ ಬರೋಬ್ಬರಿ 21GB ಡೇಟಾ

Spread the love

ಭಾರತೀಯ ಟಿಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ (Reliance) ಒಡೆತನದ ಜಿಯೋ (Jio) ಅತ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ, ಆಫರ್​ಗಳನ್ನು ಪರಿಚಯಿಸಿ ಅಲ್ಪ ಅವದಿಯಲ್ಲಿ ಸಾಕಷ್ಟು ಹೆಸರು ಮಾಡಿದೆ. ಕೊರೊನಾ ಕಾಲದಲ್ಲಂತು ವರ್ಕ್ ಫ್ರಂ ಹೋಮ್ ಸೇರಿದಂತೆ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಇದೇ ಕಾರಣಕ್ಕೆ ಜಿಯೋ ಈಗಲೂ ನಂಬರ್ ಒನ್ ಸ್ಥಾನ ಪಡೆದುಕೊಂಡಿರವುದು.

ಏರ್ಟೆಲ್, ಬಿಎಸ್​ಎನ್​ಎಲ್, ವೋಡಾಫೋನ್- ಐಡಿಯಾಕ್ಕೆ ಹೋಲಿಸಿದರೆ ಜಿಯೋ ಟೆಲಿಕಾಂ ಕಂಪನಿಯ ಅಗ್ಗದ ರಿಚಾರ್ಜ್ ಪ್ಲಾನ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅಲ್ಲದೆ ಸಾಕಷ್ಟು ಬೆನಿಫಿಟ್ ಗಳನ್ನು ಕೂಡ ನೀಡುತ್ತಿವೆ. ಅವುಗಳಲ್ಲಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ 98 ರೂಪಾಯಿಯ ಪ್ಲಾನ್ ನಲ್ಲಿ ಬೊಂಬಾಟ್ ಪ್ರಯೋಜನಗಳಿವೆ.

ಜಿಯೋದ 98 ರೂ. ಪ್ಲಾನ್ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದು, ಹಲವು ಲಾಭಗಳು ಸಿಗುತ್ತಿವೆ. ಈ ಪ್ಲಾನ್ ನ ವ್ಯಾಲಿಡಿಟಿ 14 ದಿನಗಳದ್ದಾಗಿದೆ. ಇದರಲ್ಲಿ ಬಳಕೆದಾರರಿಗೆ ನಿತ್ಯ 1.5 ಜಿಬಿ ಡೇಟಾ ಸಿಗುತ್ತಿದೆ. ಅಂದರೆ ಬಳಕೆದಾರರಿಗೆ ಒಟ್ಟು 14 ದಿನಗಳಲ್ಲಿ 21 ಜಿಬಿ ಡೇಟಾದ ಪ್ರಯೋಜನವನ್ನು ಪಡೆಯಬಹುದು. ಯಾವುದೇ ನಂಬರ್ ಗೆ ಉಚಿತ ಕರೆ, ಉಚಿತ ಜಿಯೋ ಆಯಪ್ ಬಳಕೆಯ ಅವಕಾಶ ಕೂಡ ಕಲ್ಪಿಸಲಾಗುತ್ತಿದೆ.

ಅಂತೆಯೆ 69 ರೂ.ಗಳ ಈ ಪ್ರಿಪೇಯ್ಡ್ ಯೋಜನೆಯ ಸಿಂಧುತ್ವ ಕೂಡಾ 14 ದಿನಗಳು. ಈ ಯೋಜನೆಯಲ್ಲಿ ಕೂಡಾ ಬಳಕೆದಾರರಿಗೆಅನಿಯಮಿತ ಉಚಿತ ಕರೆಯ ಪ್ರಯೋಜನ ಸಿಗಲಿದೆ. ಇದಲ್ಲದೆ, ಬಳಕೆದಾರರು 500MB ಹೈಸ್ಪೀಡ್ ಡೇಟಾ ಸಿಗಲಿದೆ. ಜೊತೆಗೆ ಪ್ರತಿದಿನ 100 ಫ್ರೀ ಎಸ್‌ಎಂಎಸ್‌ ಕೂಡಾ ಇರಲಿದೆ.

ಜಿಯೋಫೋನ್ ಬಳಕೆದಾರರಿಗಾಗಿ ಈ ಪ್ರಿಪೇಯ್ಡ್ ಯೋಜನೆಗಳಲ್ಲಿ ಮತ್ತೊಂದು ಪ್ರಯೋಜನ ಸಿಗಲಿದೆ. ಅದೆಂದರೆ, ಈ ಎರಡರಲ್ಲಿ ಒಂದು ಪ್ಲಾನ್ ಅನ್ನು ರೀಚಾರ್ಜ್ ಮಾಡಿದರೆ, ಅದೇ ಮೊತ್ತದ ಉಚಿತ ರೀಚಾರ್ಜ್ ಸಿಗಲಿದೆ. ಕೊರೊನಾ ಸಾಂಕ್ರಾಮಿಕದ ದೃಷ್ಟಿಯಿಂದ, ಕಂಪನಿಯು ಜಿಯೋಫೋನ್ ಬಳಕೆದಾರರ ನಿಯಮಿತ ಪ್ರಿಪೇಯ್ಡ್ ಯೋಜನೆಯೊಂದಿಗೆ ಉಚಿತ ರೀಚಾರ್ಜ್ ನೀಡುತ್ತದೆ.

ಇನ್ನೂ ಜಿಯೋ ಸಂಸ್ಥೆಯು ಹೆಚ್ಚುವರಿ ಡೇಟಾ ಬಳಕೆಗಾಗಿ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡೇಟಾ ಬಳಕೆಗಾಗಿ ಕೆಲವು 4G ಡೇಟಾ ವೋಚರ್ಸ್‌ ಆಯ್ಕೆಗಳು ಪರಿಚಯಿಸಿದೆ. ಅದರಲ್ಲಿ 11 ರೂ. ಡಾಟಾ ವೋಚರ್ ನಲ್ಲಿ 1GB ಡೇಟಾ ಲಭ್ಯ, 21 ರೂ. ವೋಚರ್‌ನಲ್ಲಿ 2GB ಡೇಟಾ, 51 ರೂ. ನಲ್ಲಿ 6GB ಡೇಟಾ, ಹಾಗೂ 101 ರೂ. ಡೇಟಾ ವೋಚರ್ ಪ್ಲಾನಿನಲ್ಲಿ ಒಟ್ಟು 12GB ಡೇಟಾ ಸಿಗಲಿದೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ