ಚಿಕ್ಕೋಡಿ – ನಿಪ್ಪಾಣಿ ತಾಲೂಕಿನ ಸಮಗ್ರ ಅಭಿವೃದ್ಧಿ ಜೊತೆಗೆ ರೈತರ ಅಭಿವೃದ್ಧಿಗೆ ಕೂಡ ಆದ್ಯತೆ ನೀಡಲಾಗಿದೆ. ಕಳೆದ ೩೦-೩೫ ವರ್ಷಗಳಿಂದ ನೀರಿಲ್ಲದೆ ಒಣಗುತ್ತಿರುವ ಬರಡು ಭೂಮಿ ನೀರಾವರಿ ಯೋಜನೆಯಿಂದ ಹಸಿರಿಕರಣವಾಗಲಿದೆ. ಗಂಗಾಕಲ್ಯಾಣ ಯೋಜನೆಯಿಂದ ರೈತರ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸಮೀಪದ ಸೌಂದಲಗಾ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ೧.೫ ಕೋಟಿ ವೆಚ್ಚದಲ್ಲಿ ಗಂಗಾಕಲ್ಯಾಣ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಸಿವು ನೀಗಿಸುತ್ತಿರುವ ಅನ್ನದಾತರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ. ಹೀಗಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲು ವೇದಗಂಗಾ ನದಿಯಿಂದ ಶ್ರೀ ಅಂಬಾಬಾಯಿ ಗಂಗಾ ಕಲ್ಯಾಣ ಪೈಪ್ ಲೈನ್ ಮೂಲಕ ನೀರು ಹರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಈ ಭಾಗದ ರೈತರ ಸುಮಾರು ೪೦ ಎಕರೆ ಕೃಷಿ ಪ್ರದೇಶಗಳಿಗೆ ನೀರು ಹರಿಯಲಿದ್ದು, ಅನ್ನದಾತರ ಕೃಷಿ ಚಟುವಟಿಕೆಗಳು ಸಮೃದ್ಧಿಯಾಗಲಿ ಎಂದು ಹಾರೈಸಿದರು.
Laxmi News 24×7