Breaking News

ಕಪ್ಪತ್ತಗುಡ್ಡದಲ್ಲಿ ಖಾಕಿಯ ಟ್ರೆಕ್ಕಿಂಗ್‌ ಮಜಾ

Spread the love

ಗದಗ/ಶಿರಹಟ್ಟಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದಲ್ಲಿ ರವಿವಾರ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣವಿತ್ತು. ಕೈಗೆ ತಾಗುವಷ್ಟು ಮೋಡಗಳ ಮಧ್ಯೆ ಖಾಕಿ ಪಡೆಯ ಹೆಜ್ಜೆಗಳ ಸಪ್ಪಳ ಜೋರಾಗಿತ್ತು.

ಹೌದು. ರವಿವಾರ ಬೆಳಗ್ಗೆ ಎಸ್ಪಿ ಎನ್‌.ಯತೀಶ್‌ ಅವರ ನೇತೃತ್ವದಲ್ಲಿ ಪೊಲೀಸ್‌ ಅಧಿ ಕಾರಿಗಳು ಹಾಗೂ ಆಯ್ದ ಸಿಬ್ಬಂದಿ ಟ್ರೆಕ್ಕಿಂಗ್‌ನಲ್ಲಿ ಒಬ್ಬರಿಗಿಂತ ಒಬ್ಬರು ಮೇಲೆಂಬಂತೆ ಗಿರಿ ಶಿಖರವನ್ನೇರಿ ಕಪ್ಪತ್ತಗಿರಿ ಸೌಂದರ್ಯ ಸವಿಯಲು ಬಂದಿದ್ದ ಪ್ರವಾಸಿಗರ ಮನ ಸೆಳೆದರು. ಸದಾ ಕೆಲಸದ ಒತ್ತಡ ಹಾಗೂ ಇತ್ತೀಚೆಗೆ ಕೋವಿಡ್‌ 1-2ನೇ ಅಲೆಯಲ್ಲಿ ಸೋಂಕು ಹಬ್ಬುವುದನ್ನು ತಡೆಗಟ್ಟಲು ಪೊಲೀಸರು ಹಗಲಿರುಳು ಕರ್ತವ್ಯ ನಿರ್ವಹಿಸಿದ್ದಾರೆ. ಕೆಲವರು ಹಲವು ತಿಂಗಳಿಂದ ಒಂದೇ ಒಂದು ವಾರದ ರಜೆಯನ್ನೂ ಪಡೆಯದೇ ಕರ್ತವ್ಯ ನಿರ್ವಹಿಸಿದ್ದಾರೆ. ಅವರಲ್ಲಿ ಹುಮ್ಮಸ್ಸು ಮೂಡಿಸುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಟ್ರೆಕ್ಕಿಂಗ್‌ ಏರ್ಪಡಿಸಿತ್ತು.

ರೋಮಾಂಚನ ಅನುಭವ: ಶಿರಹಟ್ಟಿ ತಾಲೂಕಿನ ಕಡಕೋಳ ಭಾಗದ ಅರಣ್ಯ ವ್ಯಾಪ್ತಿಯಲ್ಲಿ ಬೆಳಗ್ಗೆ 6.30 ರಿಂದ 10 ಗಂಟೆವರೆಗೆ ಸುಮಾರು 3 ಗಂಟೆಗೂ ಹೆಚ್ಚು ಕಾಲ ಟ್ರೆಕ್ಕಿಂಗ್‌ ನಡೆಯಿತು. ಕಡಕೋಳದ ದೈವೀ ವನದಿಂದ ಆರಂಭಗೊಂಡು ಕಪ್ಪತ್ತ ಮಲ್ಲೇಶ್ವರ, ಗಾಳಿಗುಂಡಿ ಬಸವಣ್ಣ ದೇವಸ್ಥಾನ ಮಾರ್ಗವಾಗಿ ಗಿರಿ ಶಿಖರದಲ್ಲಿರುವ ವಿಂಡ್‌ ಪವರ್‌ ಕಚೇರಿವರೆಗೂ ಮರಳಿ ದೈವೀ ವನಕ್ಕೆ ತಲುಪಿ ಅಂತ್ಯಗೊಂಡಿತು. ಪೊಲೀಸರು ಸುಮಾರು 10 ಕಿ.ಮೀ. ಹೆಚ್ಚು ಟ್ರೆಕ್ಕಿಂಗ್‌ ನಡೆಸಿದರು. ಈ ನಡುವೆ ಹಲವೆಡೆ ಕಡಿದಾದ ಮಾರ್ಗಗಳು ಮೈನವಿರೇಳಿಸಿದವು. ಹಚ್ಚ ಹಸಿರಿನಿಂದ ಕೂಡಿದ ಕಪ್ಪತ್ತಗುಡ್ಡ ಮುದ ನೀಡಿದರೆ, ಬೆಟ್ಟದ ಮೇಲೆ ಕೈಗೆ ತಾಗುವಷ್ಟು ಸನಿಹದಲ್ಲಿ ಚಲಿಸುವ ಮೋಡಗಳು ರೋಮಾಂಚನ ಗೊಳಿಸಿದವು.

ಬೆಟ್ಟವನ್ನೇರಿದ ಆಯಾಸ ಒಂದೇ ಕ್ಷಣದಲ್ಲಿ ಮಾಯವಾಯಿತು. ಬೀಸುವ ತಂಗಾಳಿ ಮನದ ಉಲ್ಲಾಸ ಹೆಚ್ಚಿಸಿತೆಂಬುದು ಟ್ರೆಕ್ಕಿಂಗ್‌ನಲ್ಲಿ ಪಾಲ್ಗೊಂಡಿದ್ದ ಪೊಲೀಸ್‌ ಅ ಧಿಕಾರಿಗಳ ಅನುಭವ. ಡಿವೈಎಸ್ಪಿ ವಿಜಯ ಬಿರಾದರ, ವಿದ್ಯಾನಂದ ನಾಯಕ, ಗದಗ ಶಹರ ಸಿಪಿಐ ಪಿ.ವಿ.ಸಾಲಿಮಠ, ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ, ಬೆಟಗೇರಿ ಸಿಪಿಐ ಸುಬ್ಟಾರಮಠ, ಶಿರಹಟ್ಟಿ ಪಿಎಸ್‌ಐ ವಿಕಾಸ ಲಮಾಣಿ, ಗದಗ ಗ್ರಾಮೀಣ ಪಿಎಸ್‌ಐ ಅಜಿತ್‌ ಹೊಸಮನಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅ ಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಅಧಿ ಕಾರಿಗಳು ಟ್ರೆಕ್ಕಿಂಗ್‌ನಲ್ಲಿ ಪಾಲ್ಗೊಂಡಿದ್ದರು.

ಸಾವಿರಾರು ಪ್ರವಾಸಿಗರ ಭೇಟಿ: ಕೋವಿಡ್‌ ಲಾಕ್‌ ಡೌನ್‌ ಸಡಿಲಿಕೆ ಬಳಿಕ ಕಪ್ಪತ್ತಮಲ್ಲೇಶ್ವರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ದಿನಕಳೆದಂತೆ ಕಪ್ಪತ್ತಗುಡ್ಡಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಕಪ್ಪತ್ತಗುಡ್ಡದ ಡೋಣಿ ಮತ್ತು ಕಡಕೋಳ ಭಾಗದಲ್ಲಿ ಸುಮಾರು 2 ಸಾವಿರ ಜನರು ಆಗಮಿಸಿದ್ದರೆಂದು ಅಂದಾಜಿಸಲಾಗಿದೆ.


Spread the love

About Laxminews 24x7

Check Also

ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ವಿಜಯೇಂದ್ರ ವಿರುದ್ಧವೂ ನೋಟೀಸ್ ಜಾರಿಯಾಗಬೇಕು: ರಮೇಶ್ ಜಾರಕಿಹೊಳಿ

Spread the loveದೆಹಲಿ: ಪ್ರಸ್ತುತವಾಗಿ ನಾವು ವಕ್ಫ್ ವಿರುದ್ಧ ಮಾಡಿದ ಹೋರಾಟದ ವರದಿಯನ್ನು ಜೆಪಿಸಿಗೆ ನೀಡಲು ಬಂದಿದ್ದೇವೆ, ಮುಂದಿನ ಸಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ