Breaking News

ತಮಿಳು ನಾಮ ಫ‌ಲಕಕ್ಕೆ ಮಸಿ ಬಳಿದು ವಾಟಾಳ್‌ ಪ್ರತಿಭಟನೆ

Spread the love

ಕೆಜಿಎಫ್: ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನನೀಡಬೇಕು ಎಂದು ಆಗ್ರಹಿಸಿ ನಗರದ ಕುವೆಂಪುಬಸ್‌ ನಿಲ್ದಾಣದಲ್ಲಿ ಬರೆಯಲಾಗಿದ್ದ ತಮಿಳುನಾಮಫ‌ಲಕಕ್ಕೆ ಮಸಿ ಬಳಿಯುವ ಮೂಲಕ ಕನ್ನಡಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ನಾಗರಾಜ್‌ಪ್ರತಿಭಟಿಸಿದರು.

ಪೂರ್ವಾನುಮತಿ ಇಲ್ಲದೆ ಪ್ರತಿಭಟನೆನಡೆಸಿದ್ದರಿಂದ ವಾಟಾಳ್‌ ನಾಗರಾಜ್‌ ಹಾಗೂಬೆಂಬಲಿಗರನ್ನು ಪೊಲೀಸರು ಬಂಧಿಸಿ ಬೆಮೆಲ್‌ಠಾಣೆಯಲ್ಲಿ ಬಿಡುಗಡೆಗೊಳಿಸಿದರು.

ನಗರದಲ್ಲಿರುವಬಸ್‌ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ತಮಿಳುನಾಮಫ‌ಲಕ ಹಾಕಲಾಗಿದೆ ಎಂದು ಕ®ಡ ‌° ಪರಸಂಘಟನೆಗಳ ಮುಖಂಡರು, ವಾಟಾಳ್‌ ನಾಗರಾಜ್‌ಗೆ ತಿಳಿಸಿದ್ದರು. ಈ ಹಿ®ಲೆ ೆ° ಯಲ್ಲಿ ವಾಟಾಳ್‌ ಪಕ್ಷದಅಧ್ಯಕ್ಷ ನಾಗರಾಜ್‌ ಕೆಜಿಎಫ್ ನಗರಕ್ಕೆ ಆಗಮಿಸಿತಮಿಳು ನಾಮಫ‌ಲಕಗಳಿಗೆ ಕಪ್ಪು ಮಸಿ ಬಳಿದುಪ್ರತಿಭಟಿಸಿದರು.ಅನ್ಯ ಭಾಷೆ ಫ‌ಲಕ ತೆರವು ಮಾಡಿ: ಈ ವೇಳೆಮಾತನಾಡಿದ ವಾಟಾಳ್‌ ನಾಗರಾಜ್‌, ಗಡಿಭಾಗದಲ್ಲಿ ತಮಿಳು ಭಾಷೆಯಲ್ಲೇ ನಾಮಫ‌ಲಕಹಾಕಿದ್ದನ್ನು ಖಂಡಿಸಲಾಗುವುದು,

ರಾಜ್ಯದಲ್ಲಿ ಕನ್ನಡಭಾಷೆಗೆ ಆದ್ಯತೆ ನೀಡಬೇಕು, ತಮಿಳು, ತೆಲುಗು,ಮಲೆಯಾಳಿ ಭಾಷೆಗಳ ನಾಮಫ‌ಲಕ ತೆಗೆದುಹಾಕಬೇಕು, ಇಲ್ಲದಿದ್ದರೆ ಚಿನ್ನದ ಗಣಿ ಪ್ರದೇಶಕ್ಕೆ ನುಗ್ಗಿ,ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.ನಗರಸಭೆಗೆ ಮುತ್ತಿಗೆ: ನಗರಸಭೆ ಅಧ್ಯಕ್ಷರುಅಧಿಕಾರಿಗಳಿಗೆ ಒಂದು ತಿಂಗಳ ಕಾಲ ಅವಕಾಶವನ್ನುನೀಡಲಿದ್ದೇÊ, ಒೆ ಂದು ವೇಳೆ ತಮಿಳು ನಾಮಫ‌ಲಕತೆರವುಗೊಳಿಸದಿದ್ದರೆ ಉಗ್ರ ಹೋರಾಟರೂಪಿಸಬೇಕಾಗುತ್ತದೆ, ನಗರಸಭೆ ಕಚೇರಿಗೆ ಮುತ್ತಿಗೆಹಾಕಲಾಗುವುದು ಎಂದು ಹೇಳಿದರು.ಕುವೆಂಪು ಬಸ್‌ ನಿಲ್ದಾಣದಲ್ಲಿ ಬರೆಯಲಾಗಿದ್ದ ತಮಿಳು ನಾಮಫ‌ಲಕಕ್ಕೆ ಮಸಿ ಬಳಿಯುವ ಮುನ್ನಪೊಲೀಸರು ಹಾಗೂ ವಾಟಾಳ್‌ ನಾಗರಾಜ್‌ ಮಧ್ಯೆವಾಕ್ಸಮರ ನಡೆಯಿತು.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ