ಬೆಳಗಾವಿ : ದತ್ತ ರಾಮ್ ಹರಿಶ್ಚಂದ್ರ ಅನ್ವೇಕರ್ ಅವರ ಮಗಳು ದಿವ್ಯಶ್ರೀ ರಾಜೇಂದ್ರ (ವಯಸ್ಸು ೨೭) ಜೂನ್ ೨೯ ರಂದು ಮಧ್ಯಾಹ್ನ ೧ ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿ ಕಾಣೆಯಾಗಿದ್ದಾಳೆ ಎಂದು ಜುಲೈ ೮ರಂದು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿವ್ಯಶ್ರೀ ಪಾವುಸ್ಕರ (೨೭) ೪ ಅಡಿ ೮ ಇಂಚು ಎತ್ತರವಾಗಿದ್ದು ದುಂಡುಮುಖ, ಗೋಧಿ ಮೈಬಣ್ಣ ಉದ್ದ ಮೂಗು, ಎತ್ತರವಾದ ಹಣೆ, ಮೈಯಿಂದ ಸದೃಢವಾಗಿರುತ್ತಾಳೆ, ಹಾಗೂ ಹಸಿರು ಬಣ್ಣದ ಚೂಡಿದಾರ ಧರಿಸಿದ್ದು ಕನ್ನಡ, ಹಿಂದಿ, ಮರಾಠಿ ಭಾಷೆಯನ್ನು ಮಾತನಾಡುತ್ತಾಳೆ.
ಈ ಚಹರೆಯುಳ್ಳ ಮಹಿಳೆ ಪತ್ತೆಯಾದಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕಲ್ಲಿ ಟಿಳಕವಾಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧ ೨೪೦೫೨೩೬, ಪೊಲೀಸ್ ಇನ್ಸ್ಪೆಕ್ಟರ್ ಟಿಳಕವಾಡಿ ೯೪೮೦೮೦೪೦೫೨, ಪಿ ಎಸ್ ಐ ಟಿಳಕವಾಡಿ ೯೪೮೦೮೦೪೧೧೨, ಪೊಲೀಸ್ ಕಂಟ್ರೋಲ್ ರೂಂ ಬೆಳಗಾವಿ ೦೮೩೧-೨೪೦೫೨೩೧/೨೪೦೫೨೫೫, ಪಿರ್ಯಾದಿ ೯೯೬೪೮೦೪೭೯೯ ದೂರವಾಣ ಸಂಖ್ಯೆಗೆ ಸಂಪರ್ಕಿಸಬೇಕೆಂದು ಟಿಳಕವಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.