Breaking News

80 ಲಕ್ಷ ರೂ. ವೆಚ್ಚದ ಹೈಸ್ಕೂಲ್ ರಸ್ತೆ ನಿರ್ಮಾಣಕ್ಕಾಗಿ ಚಾಲನೆ ನೀಡಿದ ಅಮರನಾಥ ಜಾರಕಿಹೊಳಿ

Spread the love

ಗೋಕಾಕ: ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ಮತಕ್ಷೇತ್ರದಲ್ಲಿ ಬುಧವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಅಮರನಾಥ ಜಾರಕಿಹೊಳಿ ಅವರು ಶಿಂದಿಕುರಬೇಟ ಗ್ರಾಮದ ಹೈಸ್ಕೂಲ್ ರಸ್ತೆ ನಿರ್ಮಾಣಕ್ಕಾಗಿ 80 ಲಕ್ಷ ರೂ. ವೆಚ್ಚದ ಕಾಮಗಾರಿ ಹಾಗೂ ಜೆಎಲ್ ಬಿಸಿ ಯೋಜನೆಯಡಿ 25 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಪಾಮಲದಿನ್ನಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಹಾಗೂ ಜೆಎಲ್ ಬಿಸಿ ಯೋಜನೆಯಡಿ 50 ಲಕ್ಷ ಅನುದಾನದಡಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ದುಪದಾಳ ಗ್ರಾಮದ ಭೋವಿ ಗಲ್ಲಿ ಮತ್ತು ಕಂಬಾರ ಓಣಿಯಲ್ಲಿ ತಲಾ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಸಾವಳಗಿ ಗ್ರಾಮದಲ್ಲಿ 1.50 ಕೋಟಿ ವೆಚ್ಚದಲ್ಲಿ ಮೂರು ಸಮುದಾಯ ಭವನ ಹಾಗೂ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಸಾವಳಗಿಯಿಂದ ರೈಲ್ವೆ ನಿಲ್ದಾಣದವರೆಗೆ 3.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.


Spread the love

About Laxminews 24x7

Check Also

ಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು

Spread the loveಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು ಸುಮಾರು ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳು ಅಟೊ ರೀಕ್ಷಾದಲ್ಲಿ ನೇಣಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ