Breaking News

ಇಂದು ಬೆಳಗಾವಿಯಲ್ಲಿ ಪುಲ್ವಾಮ ಹುತಾತ್ಮ ಯೋಧನ ಅಂತ್ಯಕ್ರಿಯೆ

Spread the love

ಬೆಳಗಾವಿ: ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಕಾಶಿರಾಮ ಬೋಮನಹಳ್ಳಿ ಅವರ ಪಾರ್ಥಿವ ಶರೀರವನ್ನ ಬೆಳಗಾವಿಗೆ ತರಲಾಗಿದೆ.

 

 

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಮ್, ಉಗ್ರರ ದಾಳಿಯಿಂದ ಹುತಾತ್ಮರಾಗಿದ್ರು. ನಿನ್ನೆ ರಾತ್ರಿ ಯೋಧನ ಪಾರ್ಥಿವ ಶರೀರವನ್ನ ವಿಶೇಷ‌ ವಾಹನದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಇಂದು ಯೋಧನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

 

ವಿಜಯಪುರ ಮೂಲದ ಯೋಧ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾಗಿದ್ದು, ಯೋಧನ ಪಾರ್ಥಿವ ಶರೀರ ಇಂದು ಹುಟ್ಟೂರು ತಲುಪಲಿದೆ.

ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿ, ಕಳೆದ ಜುಲೈ 2 ರಂದು ಪುಲ್ವಾಮಾದಲ್ಲಿ ನಡೆದ ರಕ್ಷಕ್ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ.

ನಿನ್ನೆ ರಾತ್ರಿ ವಿಶೇಷ ವಿಮಾನದಲ್ಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಯೋಧನ ಪಾರ್ಥಿವ ಶರೀರ ತಲುಪಿದ್ದು, ಹುತಾತ್ಮ ಯೋಧನಿಗೆ ಬೆಳಗಾವಿಯಲ್ಲಿ ಗೌರವ ಸಲ್ಲಿಸಲಾಯಿತು.

ಇನ್ನು ಇಂದು ವಿಜಯಪುರದಿಂದ ಯೋಧನ ಸ್ವಗ್ರಾಮದವರೆಗೆ ಱಲಿ ನಡೆಸಿ, ನಂತರ ಉಕ್ಕಲಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ.

 


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ