ಮೈಸೂರು: ದುರಹಂಕಾರ ಮತ್ತು ಮಾಹಿತಿ ಇಲ್ಲದೆ ಇರುವವರಿಗೆ ನಮ್ಮ ಬಳಿಯಷ್ಟೇ ಅಲ್ಲ. ಜಗತ್ತಿನಲ್ಲೇ ಲಸಿಕೆ ಇದಕ್ಕೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಹುಲ್‌ಗಾಂಧಿ ವಿರುದ್ಧ ಕಿಡಿಕಾರಿದರು.
ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. 135 ಕೋಟಿ ಜನಸಂಖ್ಯೆ ದೇಶದಲ್ಲಿ ಒಂದೇ ದಿನ ಎಲ್ಲರಿಗೂ ವಾಕ್ಸಿನ್ ಕೊಡಲು ಸಾಧ್ಯವಿಲ್ಲ. ಜೂನ್‌ನಲ್ಲಿ 11 ಕೋಟಿ ಲಸಿಕೆ ವಿತರಣೆಯಾಗಿದೆ. ಜುಲೈ ತಿಂಗಳಿನಲ್ಲಿ 12 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಇಟ್ಟುಕೊಂಡಿದ್ದೇವೆ. ಹಾಗಾಗಿ ಸುಮ್ಮನೆ ಕಾಮೆಂಟ್ ಮಾಡಿದರೆ ಅದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ ಎಂದು ಹೇಳಿದರು.
ಜು.19ರಿಂದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, 19 ದಿನಗಳ ಕಾಲ ನಡೆಯಲಿದೆ. ಒಟ್ಟು 8 ಪ್ರಮುಖ ಮಸೂದೆಗಳಿವೆ.
ಜೊತೆಗೆ ಲೋಕಸಭೆ ಹಾಗೂ ರಾಜ್ಯಸಭೆಯಿಂದ ಪಾಸಾದ 12 ಬಿಲ್‌ಗಳು ಹಾಗೂ ಹಣಕಾಸು ಬಿಲ್‌ಗಳು ಇವೆ. ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಪ್ರತಿಪಕ್ಷದೊಂದಿಗೂ ಸಭೆ ನಡೆಸುತ್ತೇವೆ. ಪ್ರಜಾಪ್ರಭುತ್ವವೆಂದರೆ ಚರ್ಚೆ, ಖಂಡನೆ, ವಿಮರ್ಶೆ ಇರಲೇಬೇಕು. ಸರ್ಕಾರ ಎಲ್ಲಾ ರೀತಿಯ ಚರ್ಚೆಗೆ ಸಿದ್ಧವಿದೆ ಎಂದು ಹೇಳಿದರು.
Laxmi News 24×7