Breaking News

ಮಗನ ಮೇಲೆಯೇ ತಾಯಿಯ ಲೈಂಗಿಕ ದೌರ್ಜನ್ಯ: ಪೊಲೀಸರು ಇಂತಹ ಕೀಳು ಮಟ್ಟಕ್ಕೆ ಇಳಿದರಾ?

Spread the love

ತಿರುವನಂತಪುರಂ: ಕಡಕ್ಕವೂರ್​ ಪೊಕ್ಸೊ ಪ್ರಕರಣದಲ್ಲಿ ತಾಯಿಯೊಬ್ಬಳು ತನ್ನ ಮಗನ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆಂದು ತಪ್ಪಾಗಿ ಆರೋಪಿಸಲಾಗಿದ್ದು, ಘಟನೆಯ ಬಗ್ಗೆ ಪೊಲೀಸ್​ ವರದಿ ಮೇಲೆಯೇ ಅನುಮಾನ ಮೂಡಿದೆ.

ಸಂತ್ರಸ್ತ ಮಹಿಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಕರಣದಿಂದ ನನ್ನನ್ನು ಖುಲಾಸೆಗೊಳಿಸಲಾಗಿದೆ. ಆದರೆ, ನನ್ನ ಮಗನನ್ನು ಅಪರಾಧಿ ಎಂಬಂತೆ ವರದಿಯಲ್ಲಿ ಬಿಂಬಿಸಲಾಗಿದೆ ಎಂದು ತಿಳಿಸಿದ್ದಾರೆ.

ನನ್ನ ವಿರುದ್ಧ ನಕಲಿ ಪ್ರಕರಣ ದಾಖಲಿಸಿದವರ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖ ಇರಲಿಲ್ಲ. ಹೀಗಾಗಿ ಕಡಕ್ಕವೂರ್ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಗುವಿನ ಹೇಳಿಕೆಯ ಆಧಾರದ ಮೇಲೆ ಮಾತ್ರ ವರದಿಯನ್ನು ಸಿದ್ಧಪಡಿಸಲಾಗಿದೆ. ಆದರೆ, ಬಾಲಕನು ತನ್ನ ತಂದೆಯ ಒತ್ತಾಯಕ್ಕೆ ಮಣಿದು ಹೇಳಿಕೆ ನೀಡಿದ್ದಾನೆಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.

ನನ್ನ ಪತಿ ಮತ್ತು ಆತ ಪ್ರಸ್ತುತ ವಾಸಿಸುತ್ತಿರುವ ಮಹಿಳೆಯರು ಸಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇದರ ಹಿಂದಿರುವ ಎಲ್ಲರನ್ನು ಬಯಲಿಗೆ ಎಳೆಯಬೇಕು. ಪೊಲೀಸರು ಮೊದಲು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಯನ್ನು ಮಾಹಿತಿದಾರರನ್ನಾಗಿ ಸೇರಿಸಿದ್ದಾರೆ ಮತ್ತು ಬಾಲಕ ಸ್ವತಃ ಕೌನ್ಸೆಲಿಂಗ್ ಸಮಯದಲ್ಲಿ ಘಟನೆಯ ಬಗ್ಗೆ ಬಹಿರಂಗಪಡಿಸಿದ್ದನ್ನು ಎಫ್​ಐಆರ್​ನಲ್ಲಿ ಸೇರಿಸಿದ್ದು, ಇದು ನಕಲಿ ಎಫ್‌ಐಆರ್​ ಆಗಿದೆ ಎಂದು ಮಹಿಳೆ ತಿಳಿಸಿದ್ದಾಳೆ.

ತನಿಖೆಯ ವೇಳೆ ಪೊಲೀಸರು ನನಗೆ ಮಾನಸಿಕವಾಗಿ ಕಿರುಕುಳ ನೀಡಿದರು ಮತ್ತು ಕೆಟ್ಟದಾಗಿ ನಿಂದಿಸಿದರು. ಮೂರನೇ ಮಗುವಿನ ಕಸ್ಟಡಿಯನ್ನು ಪತಿಗೆ ಹಸ್ತಾಂತರಿಸಿದರೆ ಪ್ರಕರಣವನ್ನು ಹಿಂಪಡೆಯಬಹುದು ಎಂದು ಎಸ್‌ಐ ಆಮಿಷವೊಡ್ಡಿದರು. ಮೂರನೇ ಮಗುವನ್ನು ತನ್ನ ಕಸ್ಟಡಿಗೆ ಪಡೆಯಲು ನನ್ನ ಪತಿ ಅನೇಕ ಕೆಟ್ಟ ಪ್ರಯತ್ನಗಳನ್ನು ಮಾಡಿದ್ದಾರೆಂದು ಸಂತ್ರಸ್ತೆ ದೂರಿದ್ದಾರೆ.

ನನ್ನನ್ನು ಬಲೆಗೆ ಸಿಲುಕಿಸುವುದಾಗಿ ನನ್ನ ಪತಿ ದೂರವಾಣಿ ಕರೆಯಲ್ಲಿ ಬೆದರಿಕೆ ಹಾಕಿದ್ದರು. ಆದರೆ, ನಾನಿದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಪೊಕ್ಸೊ ಪ್ರಕರಣದಲ್ಲಿ ಆರೋಪಿಯಾಗಿಸಿದ ನಂತರ, ನಾನು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದೆ. ನಾನೀಗ ನನ್ನ ವಯಸ್ಸಾದ ಪೋಷಕರೊಂದಿಗೆ ವಾಸಿಸುತ್ತಿದ್ದೇನೆ. ನನಗೊಂದು ಸಣ್ಣ ಕೆಲಸವಿತ್ತು, ಆದರೆ ಅದನ್ನು ಕಳೆದುಕೊಂಡೆ. ನಾವು ಬದುಕಲು ಹೆಣಗಾಡುತ್ತಿದ್ದೇವೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡರು.


Spread the love

About Laxminews 24x7

Check Also

ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Spread the love ಹೊಸದಿಲ್ಲಿ: 5 ಲಕ್ಷ ರೂ. ಲಂಚ ಸ್ವೀಕಾರದ ಆರೋಪ ಎದುರಿಸುತ್ತಿರುವ ದಿಲ್ಲಿ ನಗರ ವಸತಿ ಸುಧಾರಣ ಮಂಡಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ