Breaking News

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ವಿಜಯಪುರಕ್ಕೆ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿಯಾಗಿ ಮಾತುಕತೆ

Spread the love

ವಿಜಯಪುರ – ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ವಿಜಯಪುರಕ್ಕೆ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಇಲಾಖೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಬಂದಿರುವ ಅವರು, ಯತ್ನಾಳ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲಿದ್ದಾರೆ. ಆದರೆ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ರಾಜಕೀಯ ಮಾತುಕತೆ ಇಲ್ಲ ಎಂದಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ ಬಹು ಹಿಂದಿನಿಂದಲೇ ಪ್ರಯತ್ನ ನಡೆಸುತ್ತಿದ್ದರೆ ಯೋಗೀಶ್ವರ ಈಚೆಗೆ ಆರಂಭಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ರಾಜ್ಯಕ್ಕೆ ಆಗಮಿಸಿ ಅಹವಾಲು ಆಲಿಸಿ ಹೋಗಿದ್ದಾರೆ. ಕೇವಲ ಒಂದಿಬ್ಬರು ಮಾತ್ರ ಸಿಎಂ ಬದಲಾವಣೆ ವಿಷಯ ಪ್ರಸ್ತಾಪಿಸಿದ್ದಾರೆ. ಉಳಿದಂತೆ ಏನೂ ಸಮಸ್ಯೆ ಇಲ್ಲ ಎಂದು ಹೇಳಿ ಹೋಗಿದ್ದಾರೆ. ಈ ಸಂಬಂಧ ಸುಮಾರು 80 ಪುಟಗಳ ವರದಿಯನ್ನೂ ಹೈಕಮಾಂಡ್ ಗೆ ಸಲ್ಲಿಸಿದ್ದಾರೆ.

ಇದಾದ ಮೇಲೂ ಯೋಗೀಶ್ವರ ತಮ್ಮ ವರ್ತನೆ ಬದಲಿಸಿಲ್ಲ. ನಾವು ಪರೀಕ್ಷೆ ಬರೆದಿದ್ದೇವೆ. ಹೈಕಮಾಂಡ್ ನಿಂದ ಫಲಿತಾಂಶ ಬರಬೇಕಿದೆ ಎಂದಿದ್ದರು. ಇಂದು ಕೂಡ ಇದೇ ಮಾತನ್ನು ಪುನರುಚ್ಛರಿಸಿದ್ದಾರೆ. ಎಕ್ಸಾಂ ಬರೆದಿದ್ದೇವೆ. ಫಲಿತಾಂಶಕ್ಕಾಗಿ ಕಾಯೋಣ ಕಾಯೋಣ ಎಂದಿದ್ದಾರೆ. ಅರುಣ ಸಿಂಗ್ ಬಂದು ಸ್ಪಷ್ಟನೆ ನೀಡಿ ಹೋದ ಬಳಿಕವೂ ಯೋಗೀಶ್ವರ ಪ್ರಯತ್ನ ನಿಂತಿಲ್ಲ. ಮತ್ತೊಮ್ಮೆ ದೆಹಲಿವರೆಗೂ ಹೋಗಿ ಬಂದಿದ್ದಾರೆ.


Spread the love

About Laxminews 24x7

Check Also

ಜನವರಿ 22ರಿಂದ ಜನವರಿ 31ರವರೆಗೆ ಜಂಟಿ ಅಧಿವೇಶನ, ನರೇಗಾ ಬಗ್ಗೆ ವಿಶೇಷ ಚರ್ಚೆ: ಸಿಎಂ

Spread the loveಬೆಂಗಳೂರು: ಜನವರಿ 22 ರಿಂದ ಜನವರಿ 31ರ ವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ಅಧಿವೇಶನದ ವೇಳೆ ನರೇಗಾ(MGNREGA) ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ