ಚಿಕ್ಕೋಡಿ(ಬೆಳಗಾವಿ): ಚಾಲೆಂಜಿಗ್ ಸ್ಟಾರ್ ದರ್ಶನ ಅಭಿಮಾನಿಗಳು ಅವರ ಮೇಲಿನ ಪ್ರೀತಿಯಿಂದಾಗಿ ವಿಶಿಷ್ಟವಾಗಿ ತಮ್ಮ ಅಭಿಮಾನವನ್ನ ಪ್ರದರ್ಶನ ಮಾಡುತ್ತಾರೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಆಚರಣೆ ಮಾಡುವ ಕಾರ ಹುಣ್ಣಿಮೆಯಲ್ಲೂ ಡಿ ಬಾಸ್ ಅಭಿಮಾನಿಗಳು ವಿಭಿನ್ನವಾಗಿ ತಮ್ಮ ಬಾಸ್ ಮೇಲೆ ಪ್ರೀತಿ ತೋರಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಆಚರಣೆ ಮಾಡುವ ರೈತರ ಹಬ್ಬ ಕಾರ ಹುಣ್ಣಿಮೆಯ ನಿಮಿತ್ತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಎತ್ತುಗಳ ಮೇಲೆ ದರ್ಶನ ಚಿತ್ರ ಬಿಡಿಸಿ ಅವರ ಅಭಿಮಾನಿಗಳು ಡಿ ಬಾಸ್ ಮೇಲಿನ ಅಭಿಮಾನ ತೋರಿದ್ದಾರೆ. ಕಾರ ಹುಣ್ಣಿಮೆ ಸಂದರ್ಭದಲ್ಲಿ ಎತ್ತುಗಳನ್ನ ಬಣ್ಣದಿಂದ ಶೃಂಗರಿಸುವದು ಮೊದಲಿನಿಂದ ವಾಡಿಕೆ ಆದರೆ ಈ ಬಾರಿ ಶಮನೇವಾಡಿ ಗ್ರಾಮದ ಪ್ರದೀಪ ಖೋತ ಎನ್ನುವರ ಎತ್ತುಗಳ ಮೇಲೆ ಡಿ ಬಾಸ್ ಭಾವಚಿತ್ರ ಹಾಗೂ ಅವರ ಅಭಿನಯದ ಚಿತ್ರಗಳ ಟೈಟಲ್ ಹೆಸರುಗಳನ್ನ ಬಿಡಿಸಿದ್ದಾರೆ. ಡಿ ಬಾಸ್ ಅಭಿಮಾನಿಯಾಗಿರುವ ನಾಗರಾಜ ಮಾಲಗತ್ತಿ ಎಂಬ ಕಲಾವಿದ ಎತ್ತುಗಳ ಮೇಲೆ ಚಿತ್ರ ಬಿಡಿಸಿದ್ದಾರೆ. ಗ್ರಾಮದ ಡಿ ಬಾಸ್ ಅಭಿಮಾನಿಗಳು ಈ ರೀತಿ ಹೊಸ ಪ್ರಯತ್ನ ಮಾಡಿ ದರ್ಶನ ಅವರ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳ ಮೇಲೆ ವಿಶೇಷ ಕಾಳಜಿ ಇರುವ ಚಾಲೆಂಜಿಗ್ ಸ್ಟಾರ್ ದರ್ಶನ ಅವರಿಗೆ ಈ ರೀತಿ ಎತ್ತುಗಳ ಚಿತ್ರ ಬಿಡಿಸಿ ದರ್ಶನ ಅವರಿಗೆ ಅರ್ಪಿಸಲಾಗಿದೆ. ಮರಾಠಿ ಪ್ರಾಬಲ್ಯವಿರುವ ಗಡಿ ಭಾಗದಲ್ಲಿ ಕನ್ನಡ ಚಿತ್ರ ನಟನಿಗೆ ಈ ರೀತಿ ಅಭಿಮಾನ ತೋರುತ್ತಿರುವದು ವಿಶೇಷವೇ ಸರಿ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಡಿ ಬಾಸ್ ಅಭಿಮಾನಿಗಳು ಕಾರಹುಣ್ಣಿಮೆ ನಿಮಿತ್ತ ಎತ್ತುಗಳ ಮೇಲೆ ದರ್ಶನ ಅವರ ಭಾವಚಿತ್ರದ ಜೊತೆಗೆ ಅವರು ಅಭಿನಯಿಸಿರುವ ಐರಾವತ, ರಾಬರ್ಟ ಚಲನಚಿತ್ರದ ಟೈಟಲ್ ಬಿಡಿಸಿರುವ ವಿಡಿಯೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ.
ಒಟ್ಟಿನಲ್ಲಿ ಉತ್ತರ ಕರ್ನಾಟಕದ ರೈತರ ಹಬ್ಬ ಕಾರ ಹುಣ್ಣಿಮೆಯಲ್ಲೂ ಡಿ ಬಾಸ್ ದರ್ಶನ ಮಿಂಚುತ್ತಿದ್ದಾರೆ. ಗಡಿ ಭಾಗದಲ್ಲೂ ಡಿ ಬಾಸ್ ಬಗ್ಗೆ ಅವರ ಅಭಿಮಾನಿಗಳು ತೋರುತ್ತಿರುವ ಅಭಿಮಾನವನ್ನ ಮೆಚ್ಚಲೇಬೇಕು.