Breaking News

61 ಲಕ್ಷ ರೂ. ಮೌಲ್ಯದ ಡ್ರಗ್ಸ್ ನಾಶಕ್ಕೆ ನಿರ್ಧಾರ :

Spread the love

ಬೆಳಗಾವಿ – ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಗಾಂಜಾವನ್ನು ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮೀಟಿ ವತಿಯಿಂದ ನಾಶಗೊಳಸಲುನಿರ್ಧರಿಸಲಾಗಿದೆ.
ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆಯುತ್ತಿದ್ದ/ಸಾಗಾಣಿಕೆ/ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಎನ್‌ಡಿಪಿಎಸ್ ಕಾಯ್ದೆಯಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ 61 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.
  ವಶಪಡಿಸಿಕೊಂಡಿದ್ದ ಗಾಂಜಾವನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿಯ ಅನುಮತಿ ಪಡೆದುಕೊಂಡು ದಿನಾಂಕ: 26.06.2021 ರಂದು ಸಮಯ ಬೆಳಗ್ಗೆ 11 ಗಂಟೆಗೆ ಮುರಗೋಡ ಮೊಲೀಸ್ ಠಾಣಾ ವ್ಯಾಪಿಯ ಹಾರೂಗೊಪ್ಪ ಗ್ರಾಮದ Green Management Pvt Ltd.  ಕಾರ್ಖಾನೆ ಸ್ಥಳದಲ್ಲಿ ನಿಯಮಾನುಸಾರ ನಾಶಗೊಳಸಲು ನಿರ್ಧರಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಒಟ್ಟೂ 126 ಪ್ರಕರಣಗಳಲ್ಲಿ 755 ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು. ಇದರ ಮೌಲ್ಯ 58.28 ಲಕ್ಷ ರೂ.
3 ಪ್ರಕರಣಗಳಲ್ಲಿ 31.4 ಕಿಲೋ ಪಾಪ್ಪಿ ವಶಪಡಿಸಿಕೊಳ್ಳಲಾಗಿದ್ದು ಇದರ ಮೌಲ್ಯ 2.73 ಲಕ್ಷ ರೂ. ಒಟ್ಟೂ 61 ಲಕ್ಷ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದು ಎಂದು ಅವರು ತಿಳಿಸಿದ್ದಾರೆ.

Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ