ಕೋಲಾರ: ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರು ಸೋಮವಾರ ರಾತ್ರಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಕಾವ್ಯ ಮೃತ ದುರ್ದೈವಿ. 23 ವರ್ಷದ ಯುವತಿ ಕಾವ್ಯಾ, ಕೋಲಾರ ತಾಲೂಕು ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಆಗಿದ್ದರು. ಕೋಲಾರ ನಗರದ ಕೋಲಾರಮ್ಮ ಬಡಾವಣೆಯಲ್ಲಿ ವಾಸವಿದ್ದ ಕಾವ್ಯಾ, ನಿನ್ನೆ ರಾತ್ರಿ ನೇಣಿಗೆ ಕೊರಳೊಡ್ಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೋಡೋಕೆ ಸುಂದರವಾಗಿದ್ದು, ಒಳ್ಳೆಯ ಕೆಲವೂ ಗಿಟ್ಟಿಸಿಕೊಂಡಿದ್ದ ಯುವತಿ ದುರಂತ ಅಂತ್ಯ ಕಾಣಲು ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರ ತನಿಖೆ ಬಳಿಕ ಬಯಲಾಗಬೇಕಿದೆ.
Laxmi News 24×7