ಮಡಿಕೇರಿ : ಯುವತಿಯ ಹೆಸರನ್ನು ಹಾಕಿಕೊಂಡು ನಕಲಿ ಪ್ರೊಪೈಲ್ ಮಾಡಿ ಫೇಸ್ಬುಕ್ನಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತಿದ್ದ ಯುವಕನನ್ನು ಉಪಾಯವಾಗಿ ಕರೆಸಿಕೊಂಡು ಥಳಿಸಿ, ನಂತರ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಇಲ್ಲಿಗೆ ಸಮೀಪದ ಹಾಕತ್ತೂರಿನ ಅಶ್ರಫ್ ಎಂಬ ಯುವಕ ಕಳೆದ 15 ದಿನಗಳಿಂದ ಅರುಣಾ ಎಂಬ ಯುವತಿಯ ಹೆಸರಿನ ಮೂಲಕ ಮಹಿಳೆಯೊಬ್ಬರೊಂದಿಗೆ ಅಶ್ಲೀಲವಾಗಿ ಚಾಟಿಂಗ್ ಮಾಡುತ್ತಿದ್ದ. ಮಹಿಳೆಯು ಈ ರೀತಿ ಚಾಟಿಂಗ್ ಮಾಡಬಾರದೆಂದು ಎಚ್ಚರಿಕೆ ನೀಡಿದ್ದರೂ ಈ ಕಾಮುಕ ತನ್ನ ಕೃತ್ಯ ಮುಂದುವರಿಸಿದ್ದ. ಸೋಮವಾರ ಆತನನ್ನು ಚಾಟಿಂಗ್ ಮೂಲಕವೇ ಉಪಾಯವಾಗಿ ಆತನನ್ನು ಮಡಿಕೇರಿಗೆ ಬರ ಮಾಡಿಕೊಳ್ಳಲಾಗಿತ್ತು.
ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಆತನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಸಿಕ್ಕಿಬಿದ್ದಾಗ ನನ್ನ ಜತೆ ಮತ್ತಿಬ್ಬರು ಇದ್ದಾರೆ ಎಂದು ಆರೋಪಿ ಮಾಹಿತಿ ನೀಡಿದ್ದು, ಇವನ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಮಡಿಕೇರಿ ಪೊಲಿಸರು ಪ್ರಕರಣದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರಾ ಎಂಬ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ
 Laxmi News 24×7
Laxmi News 24×7
				 
		 
						
					 
						
					