Breaking News

ಮಾನನಷ್ಟ ಮೊಕದ್ದಮೆಯಲ್ಲಿ ದೇವೇಗೌಡರಿಗೆ ಹಿನ್ನಡೆ: 2 ಕೋಟಿ ಪರಿಹಾರ ಕಟ್ಟಿಕೊಡಲು ಕೋರ್ಟ್ ಆದೇಶ

Spread the love

ಬೆಂಗಳೂರು: ನಂದಿ ಇನ್​ಫ್ರಾ ಸ್ಟ್ರಕ್ಚರ್ ಕಾರಿಡಾರ್ (Nandi Infrastructure Corridor Enterprises – NICE) ಕಂಪನಿಯ ವಿರುದ್ಧ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮಾಡಿದ್ದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನೈಸ್ ಕಂಪನಿಗೆ ₹ 2 ಕೋಟಿ ಪರಿಹಾರ ಕಟ್ಟಿಕೊಡಬೇಕು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ಮಾಡಿದೆ.

ದೇವೇಗೌಡರ ವಿರುದ್ಧ ನೈಸ್ ಕಂಪನಿಯು ಮಾನನಷ್ಟ ದಾವೆ ಹೂಡಿತ್ತು. ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ದೇವೇಗೌಡರು ನೈಸ್ ಸಂಸ್ಥೆಯ ಗೌರವಕ್ಕೆ ಧಕ್ಕೆ ಬರುವಂತೆ ಹೇಳಿಕೆ ನೀಡಿದ್ದರು ಕಂಪನಿಯು ಆರೋಪಿಸಿ, ₹ 10 ಕೋಟಿ ಮಾನನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಿತ್ತು.

ಕಂಪನಿಯ ಮೇಲೆ ಮಾಡಿದ್ದ ಆರೋಪವು ಸತ್ಯವೆಂದು ದೇವೇಗೌಡರು ಸಾಬೀತುಪಡಿಸಿಲ್ಲ. ಹೀಗಾಗಿ $ 2 ಕೋಟಿ ನಷ್ಟಪರಿಹಾರ ನೀಡಬೇಕೆಂದು ತೀರ್ಪು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಮಲ್ಲನಗೌಡ ತೀರ್ಪು ನೀಡಿದರು. ಸಿವಿಲ್ ಮಾನನಷ್ಟ ದಾವೆಯು 2012ರಲ್ಲಿ ದಾಖಲಾಗಿತ್ತು.

(Defamation Case Against Devegowda by NICE City Civil Court Orders 2 Crore Compensation)


Spread the love

About Laxminews 24x7

Check Also

‘I Am god’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ….ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಗೆ ಸಾಥ್.

Spread the loveಬೆಂಗಳೂರು:ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ಅವರು ತಮ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ