Breaking News
Home / ಮೂಡಲಗಿ / ಸಿಎಂ ಸ್ಥಾನದ ರೇಸ್ ನಲ್ಲಿ ನಮ್ಮ ಮೂರು ಹುಲಿಗಳಿವೆ ಎಂದ ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀ

ಸಿಎಂ ಸ್ಥಾನದ ರೇಸ್ ನಲ್ಲಿ ನಮ್ಮ ಮೂರು ಹುಲಿಗಳಿವೆ ಎಂದ ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀ

Spread the love

ದಾವಣಗೆರೆ: ಸಿಎಂ ಸ್ಥಾನದ ರೇಸ್ ನಲ್ಲಿ ನಮ್ಮ ಮೂರು ಹುಲಿಗಳಿವೆ ಎಂದು ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ದಾವಣಗೆರೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕರಿಗೆ ಮಾನ್ಯತೆ ನೀಡಲು ಕೇಳಿದ್ದೇನೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಉತ್ತರ ಕರ್ನಾಟಕದವರೇ ಸಿಎಂ ಆದ್ರೆ ಸೂಕ್ತ ಎಂದು ತಿಳಿಸಿದರು.

ಅರುಣ್‍ಸಿಂಗ್ ರನ್ನು ಭೇಟಿಯಾಗಿ ಪಂಚಮಸಾಲಿ 2ಎ ರಿಸರ್ವೇಷನ್ ಬಗ್ಗೆ ಚರ್ಚೆ ಮಾಡಲು ಹೋಗಿದ್ದು, ಅಲ್ಲಿ 2ಂ ಮೀಸಲಾತಿ ಬಗ್ಗೆ ಚರ್ಚೆ ಮಾಡಿದ್ದೇವೆ, ಅವರು ಸಮಾಜದ ವಿಚಾರವಾಗಿ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ನೀಡಿ ಎಂಬ ಹೆಚ್.ವಿಶ್ವನಾಥ್ ಹೇಳಿಕೆ ನೀಡಿರುವುದು ಉತ್ತರ ಕರ್ನಾಟಕದ ಮೇಲಿನ ಅಭಿಮಾನದಿಂದ ಹೇಳಿರಬಹುದು. ಆದ್ದರಿಂದ ಲಿಂಗಾಯತರ ಸ್ಥಾನಕ್ಕೆ ಲಿಂಗಾಯತರನ್ನೇ ತನ್ನಿ ಎಂದು ಹೇಳಿದ್ದಾರೆ. ರೇಸ್‍ನಲ್ಲಿ ನಮ್ಮವರು ಮೂರು ಹುಲಿಗಳು ಓಡುತ್ತಿದ್ದಾರೆ. ನಾನು ಒಬ್ಬರ ಹೆಸರು ಹೇಳಿ ಉಳಿದ ರೇಸ್ ನಲ್ಲಿ ಓಡುವವರ ಮನಸ್ಸಿಗೆ ನೋವು ಮಾಡಲ್ಲ. ಯಡಿಯೂರಪ್ಪ ನವರು ಈಗಾಗಲೇ ರೇಸ್‍ನಲ್ಲಿ ಓಡಿ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದಾರೆ ಎಂದರು.

ರಾಜ್ಯಕ್ಕೆ ನಾಯಕತ್ವ ನೀಡಿದ ಸಮಾಜ ಎಂದರೆ ಅದು ಲಿಂಗಾಯತ ಸಮಾಜವಾಗಿದೆ. ಬೇರೆ ಸಮಾಜದಲ್ಲಿ ರಾಜ್ಯಕ್ಕೆ ಒಂದು ಹುಲಿಯಾದರೆ, ನಮ್ಮ ಸಮಾಜದಲ್ಲಿ ಹಳ್ಳಿಗೊಂದು ಹುಲಿಗಳಿವೆ. ರಾಜಕಾರಣದಲ್ಲಿ ಅದನ್ನು ಮಾಡಬೇಕು ಇದನ್ನು ಮಾಡಬೇಕು ಎಂದು ಹೇಳುವ ಅಧಿಕಾರ ಯಾವ ಮಠಾಧೀಶರಿಗೂ ಇಲ್ಲ, ರಾಜಕಾರಣದಲ್ಲಿ ಮೂಗು ತೂರಿಸುವುದು ಸರಿಯಲ್ಲ. ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀಗಳಿಗೆ ಟಾಂಗ್ ನೀಡಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ