Breaking News

ಲಾಕ್ ಡೌನ್ ನಿಂದಾಗಿ ಬೆಳಗಾವಿಯಲ್ಲಿ ಸಂಕಷ್ಟಕ್ಕೀಡಾಗಿದ್ದ 6 ಒಂಟೆಗಳನ್ನು ರಕ್ಷಿಸಲಾಗಿದ್ದು, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್

Spread the love

ಬೆಳಗಾವಿ – ಲಾಕ್ ಡೌನ್ ನಿಂದಾಗಿ ಬೆಳಗಾವಿಯಲ್ಲಿ ಸಂಕಷ್ಟಕ್ಕೀಡಾಗಿದ್ದ 6 ಒಂಟೆಗಳನ್ನು ರಕ್ಷಿಸಲಾಗಿದ್ದು, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಉಸ್ತುವಾರಿ ನೋಡಿಕೊಂಡರು.

ಡಾ.ಸೋನಾಲಿ ಸರ್ನೋಬತ್

 

 

 

 

ಜನರ ಮನರಂಜನೆಗಾಗಿ ಕೆಲವರು ಬೆಳಗಾವಿಗೆ 7 ಒಂಟೆಗಳನ್ನು ಕರೆತಂದಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಅವುಗಳಿಗೆ ಆಹಾರ ಮತ್ತು ಆರೋಗ್ಯದ ಸಮಸ್ಯೆ ಉಂಟಾಗಿತ್ತು. ಅವುಗಳ ಮಾಲಿಕರಿಗೆ ಯಾವುದೇ ಆದಾಯವಿರಲಿಲ್ಲ. ಇದರಿಂದಾಗಿ ಒಂದು ಒಂಟೆ ಮರಣ ಹೊಂದಿತು.

ಹೈಕೋರ್ಟ್ ಆದೇಶ ಮತ್ತು ಕಾನೂನು ಪ್ರಕಾರ ಈ ರೀತಿ ಪ್ರಾಣಿಗಳನ್ನು ಮನರಂಜನೆಗೆ ಬಳಸುವುದು ನಿಷಿದ್ಧ. ಬೆಳಗಾವಿಯ ಎನಿಮಲ್ ರೆಸ್ಕ್ಯೂ ಆ್ಯಂಡ್ ಕೆರ್ (BARC) ಎನ್ ಜಿಒ ಸದಸ್ಯರು ಈ ಒಂಟೆಗಳನ್ನು ಪುಣೆ ಎಪಿಎಂಸಿಗೆ ಸಾಗಿಸಲು ಮುಂದಾದರು. ಕ್ರೇನ್ ಮೂಲಕ ಅವುಗಳನ್ನು ಲಿಫ್ಟ್ ಮಾಡಿ ಲಾರಿಗಳಲ್ಲಿ ಸಾಗಿಸಲಾಯಿತು.

 

 

 

 

 

ಈ ವೇಳೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಉಪಸ್ಥಿತರಿದ್ದು ಉಸ್ತುವಾರಿ ನೋಡಿಕೊಂಡರು. ಸೋನಾಲಿ ಸರ್ನೋಬತ್ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ವಿಷಯದಲ್ಲಿ ನೆರವು ಕೇಳಿದರು.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ