Breaking News

ಸಾಹುಕಾರ್ ಸಿಡಿ ಪ್ರಕರಣ – ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ದು ಒಪ್ಪಿಕೊಂಡ ಶಂಕಿತರು!

Spread the love

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಶಂಕಿತ ಯುವಕರ ವಿಚಾರಣೆ ನಡೆಯುತ್ತಿದೆ. ಪೊಲೀಸರ ವಿಚಾರಣೆ ವೇಳೆ ಕೆಲ ಮಾಹಿತಿ ನೀಡಿರುವ ನರೇಶ್ ಮತ್ತು ಶ್ರವಣ್ ಎಸ್‍ಐಟಿಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಿಚಾರಣೆ ವೇಳೆ ಯುವತಿ ಮತ್ತು ಜಾರಕಿಹೊಳಿ ಬಗೆಗಿನ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಗೆ ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ದು ನಾವೇ ಎಂದು ಶ್ರವಣ್ ಒಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಟಿಂಗ್ ಆದ ನಂತರ ಯುವತಿ ನನಗೆ ಕಾಲ್ ಮಾಡಿದ್ದು ನಿಜ. ಸ್ಟಿಂಗ್ ಕ್ಯಾಮೆರಾದಲ್ಲಿ ವೀಡಿಯೋ ಆಗುವ ಮೊದಲೆ ರಾಸಲೀಲೆ ವಿಡಿಯೋ ಆಗಿತ್ತಂತೆ.

ಯುವತಿ ಹೇಳಿದ್ರಿಂದ ಸ್ಟಿಂಗ್ ಮಾಡೋಕೆ ಹೇಳಿದ್ದೀವಿ. ಆದ್ರೆ ವೀಡಿಯೋ ಆದ್ಮೇಲೆ ನಾವು ನೋಡಿಲ್ಲ. ಇದರ ರಾ ಫುಟೇಜ್ ಎಲ್ಲವೂ ಯುವತಿ ಮನೆಯಲ್ಲಿತ್ತು. ಯುವತಿ ಮನೆಗೂ ಜಾರಕಿಹೊಳಿ ಕಡೆಯವರು ಬಂದು ಹೋಗಿದ್ದಾರೆ ಎಂದು ಶ್ರವಣ್ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗಿದೆ.

ವೀಡಿಯೋ ನಂತರ ಯುವತಿಗೆ ಅವರ ಮನೆಯವರಿಗೆ ತಿಳಿಸುವುದಾಗಿ ಹೇಳಲಾಗಿತ್ತು. ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿ ಎಂದು ತಿಳಿಸಲಾಗಿತ್ತು. ಆದ್ರೆ ಯುವತಿ ಹೆದರಿ ದೂರು ನೀಡಲು ಹಿಂದೇಟು ಹಾಕಿದರು.

ಜೀವ ಭಯದಿಂದ ನಾವೂ ಊರು ಬಿಡಬೇಕಾಯ್ತು. ಹೆಚ್ಚಾಗಿ ರೈಲು, ಬಸ್ ಪ್ರಯಾಣ ಮಾಡಿದ್ದೀವಿ. ಜಾರಕಿಹೊಳಿ ಪಿಎ ನಾಗರಾಜ್ ಅವರ ಬಿಎಸ್‍ಎನ್‍ಎಲ್ ನಂಬರ್ ನಿಂದ ಯುವತಿಗೆ ಕರೆ ಬರುತ್ತಿತ್ತು. ಇದೇ ನಾಗರಾಜ್ ಮೊದಲು ಜಾರಕಿಹೊಳಿ ಅಪಾರ್ಟ್ ರ್ಮೆಂಟ್ ಗೆ ಕರೆದೊಕೊಂಡು ಹೋಗಿದ್ದರು ಎಂದು ಶ್ರವಣ್ ಎಸಿಪಿ ಧರ್ಮೇಂದ್ರ ಮುಂದೆ ಹೇಳಿಕೆ ನೀಡಿದ್ದಾನೆ. ಸದ್ಯ ಸೋಮವಾರ 11 ಗಂಟೆ ವಿಚಾರಣೆಗೆ ಹಾಜರಾಗುವಂತೆ ನರೇಶ್ ಗೆ ನೋಟಿಸ್ ನೀಡಿದ್ರೆ, ಮಂಗಳವಾರ 11 ಗಂಟೆಗೆ ಹಾಜರಾಗುವಂತೆ ಶ್ರವಣ್ ಗೆ ನೋಟಿಸ್ ನೀಡಲಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ‌ ಇಲ್ಲ : ಆರ್ ವಿ ದೇಶಪಾಂಡೆ

Spread the loveಶಿರಸಿ (ಉತ್ತರ ಕನ್ನಡ): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಆ ವಿಷಯಕ್ಕೆ ಪೂರ್ಣವಿರಾಮ ಇಡಲಾಗಿದ್ದು, ಮುಖ್ಯಮಂತ್ರಿ ಬದಲಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ