Breaking News

ಗಂಡನ ಕೊಲೆಗೈದು ಮರ್ಮಾಂಗ ಫ್ರೈ ಮಾಡಿ ವಿಕೃತಿ ಮೆರೆದ ಪತ್ನಿ

Spread the love

ಬ್ರೆಜಿಲ್ : ಬ್ರೆಜಿಲ್​ನ ಸಾವೊ ಗೊನ್ಕಾಲೊ ನಗರದಲ್ಲಿ ಮಹಿಳೆಯೊಬ್ಬಳ ವಿಕೃತಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಕ್ರಿಸ್ಟಿನಾ ರೊಡ್ರಿಗಸ್ ಮಸಾಡೊ ಎಂಬಾಕೆ ತನ್ನ ಗಂಡ ಆಂಡ್ರೆ ಎಂಬಾತನ ಕೊಂದು ಆತನ ಮರ್ಮಾಂಗವನ್ನೇ ಕಟ್ ಮಾಡಿ ಫ್ರೈಮಾಡಿದ್ದಾಳೆ.

ದಂಪತಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇತ್ತು ಎನ್ನಲಾಗಿದೆ.. ಅಲ್ಲದೇ ದಂಪತಿಗೆ 8 ವರ್ಷದ ಮಗ ಹಾಗೂ 5 ವರ್ಷದ ಮಗಳಿದ್ದಾಳೆ. ಇವರು ಮದುವೆಯಾಗಿ ಸುಮಾರು 10 ವರ್ಷಗಳಾದ ನಂತರ ಬೇರೆಯಾಗಿ , ಮತ್ತೆ 2 ವರ್ಷಗಳ ನಂತರ ಒಂದಾಗಿದ್ದರು ಎನ್ನಲಾಗಿದೆ..

ಆದ್ರೂ ಇವರ ನಡುವಿನ ಭಿನ್ನಾಭಿಪ್ರಾಯಗಳು ಮುಗಿದಿರಲಿಲ್ಲ.. ಹೀಗೆಯೇ ಪದೇ ಪದೇ ಜಗಳವಾಗುತ್ತಿದ್ದು, ಒಂದು ದಿನ ಕ್ರಿಸ್ಟಿನಾ ಬೆಳ್ಲಂ ಬೆಳಿಗ್ಗೆ ತನ್ನ ಪತಿ ಆಂಡ್ರೆಯ ಕೊಂದು , ಆತನ ಮರ್ಮಾಂಗವನ್ನು ಕತ್ತರಿಸಿ, ಅದಕ್ಕೆ ಒಂದಿಷ್ಟು ಎಣ್ಣೆ ಹಾಕಿ ಫ್ರೈ ಮಾಡಿದ್ದಾಳೆ.

ಬಳಿಕ ಪೊಲೀಸರು ಆಕೆಯನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ , ಆಂಡ್ರೆ ಸದಾ ಹಿಂಸೆ ನೀಡುತ್ತಿದ್ದ, ವಿಚ್ಛೇಧನ ಪಡೆಯುವುದಕ್ಕೂ ಬಿಡದೇ ಚಿತ್ರಹಿಂಸೆ ನೀಡ್ತಿದ್ದ ಹೀಗಾಗಿ ನಾನು ರೀತಿ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ