Breaking News

ಪ್ರಿಯತಮೆಯನ್ನು ಕರೆಸಿಕೊಳ್ಳಲು 10 ತಿಂಗಳ ಮಗುವನ್ನೇ ಕಿಡ್ನಾಪ್ ಮಾಡಿದ್ದ ಪಾಗಲ್ ಪ್ರೇಮಿ ಅರೆಸ್ಟ್

Spread the love

ತುಮಕೂರು: ಪ್ರಿಯತಮೆಗಾಗಿ 10 ತಿಂಗಳ ಮಗುವನ್ನೇ ಯುವಕ ಅಪಹರಿಸಿರುವ ಘಟನೆ ತುಮಕೂರು ನಗರದ ಪುರೋಸ್ ಕಾಲೋನಿಯಲ್ಲಿ ನಡೆದಿದೆ. ತನ್ನ ಪ್ರಿಯತಮೆಯನ್ನು ತನ್ನ ಬಳಿ ಕರೆಸಿಕೊಳ್ಳಲು ಯುವಕ 10 ತಿಂಗಳ ಪುಟ್ಟ ಮಗುವನ್ನು ಅಪಹರಣ ಮಾಡಿದ್ದ. ಸದ್ಯ ಈಗ ಆರೋಪಿ ಅರೆಸ್ಟ್ ಆಗಿದ್ದಾನೆ.

25 ವರ್ಷದ ಸಿದ್ದಿಕ್ ಮತ್ತು ಸಲ್ಮಾ ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ದರು. ಅಲ್ಲದೆ ಇದರ ನಡುವೆ ಸಿದ್ದಿಕ್, ಸಲ್ಮಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇಬ್ಬರೂ ಜೊತೆಗಿದ್ದರು. ಆದರೆ ಕೆಲ ದಿನಗಳ ಹಿಂದೆ ಸಲ್ಮಾ, ಸಿದ್ದಿಕ್ನನ್ನ ಬಿಟ್ಟು ಮನೆಗೆ ತೆರಳಿದ್ದಳು. ಹೀಗಾಗಿ ಸಿದ್ದಿಕ್ ಪದೇ ಪದೇ ವಾಪಸ್ ಬರುವಂತೆ ಪೀಡಿಸುತ್ತಿದ್ದ. ಆದರೆ ಸಲ್ಮಾ ಬಂದಿರಲಿಲ್ಲ. ಹೀಗಾಗಿ ಸಲ್ಮಾ ತಮ್ಮನ ಮಗುವನ್ನು ಹೊತ್ತೊಯ್ದಿದ್ದಾನೆ. ವಾರದ ಹಿಂದೆ ಬೆಳಗಿನ ಜಾವ ಸಲ್ಮಾಳ ಮನೆಗೆ ಬಂದು ತನ್ನ ಪ್ರಿಯತಮೆಯ ತಮ್ಮನ 10 ತಿಂಗಳ ಗಂಡು ಮಗುವನ್ನು ಹೊತ್ತೊಯ್ದಿದ್ದಾನೆ.

ಬಳಿಕ ಮನೆಗೆ ಫೋನ್ ಮಾಡಿ ನಾನು ಮೈಸೂರಿನಲ್ಲಿದ್ದೇನೆ. ಪ್ರಿಯತಮೆ ಸಲ್ಮಾಳನ್ನ ಕಳಿಸಿ ಮಗುವನ್ನು ಕರೆದೊಯ್ಯುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಭಯಗೊಂಡ ಕುಟುಂಬಸ್ಥರು ಮಗುವನ್ನು ತರುವಂತೆ ಹೇಳಿ ಸಲ್ಮಾಳನ್ನ ಸಿದ್ದಿಕ್ ಇರುವಲ್ಲಿಗೆ ಕಳಿಸಿದ್ದಾರೆ. ಆದ್ರೆ ಅಲ್ಲಿ ಹೋಗಿ ನೋಡಿದಾಗ ಮಗು ಇರಲಿಲ್ಲ, ಬಳಿಕ ಇಬ್ಬರೂ ಅಲ್ಲೇ ಸೆಟೆಲ್ ಆಗಿದ್ದಾರೆ. ಇಬ್ಬರಿಂದಲೂ ಕುಟುಂಬಸ್ಥರಿಗೆ ಯಾವುದೇ ಕರೆ, ಮಾಹಿತಿ ಸಿಕ್ಕಿರಲಿಲ್ಲ.

ಬಳಿಕ ಒಂದು ವಾರ ಆರಾಮಾಗಿ ಓಡಾಡಿಕೊಂಡಿದ್ದಾರೆ. ಸದ್ಯ ಸಿದ್ದಿಕ್ ಮಗುವನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಅರಸಿಕೆರೆ ಬಳಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಆರೋಪಿ ಸಿಕ್ಕರೂ ಪುಟ್ಟ ಕಂದಮ್ಮ ಮಾತ್ರ ಸಿಕ್ಕಿಲ್ಲ. ವಿಚಾರಣೆ ವೇಳೆ ಮಗುವನ್ನ ಕೆರೆಯಲ್ಲಿ ಬಿಸಾಕಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ತುಮಕೂರು ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ