Breaking News

ಸೋಂಕಿತ ಮಕ್ಕಳಿಗೂ ಕೊರೋನಾ ಲಸಿಕೆ : ಸಚಿವ ಸುಧಾಕರ್

Spread the love

ಬೆಂಗಳೂರು : ಒಂದು ವೇಳೆ ಮಕ್ಕಳಿಗೆ ಸೋಂಕು ಬಂದರೆ ಅವರಿಗೂ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು.ಈಗ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ.ಅನೇಕ ಲಸಿಕಾ ಕಂಪನಿಗಳು ಕೆಲವೆಡೆ ಟ್ರಯಲ್ ರನ್ ಮಾಡುತ್ತಿವೆ ಎಂದು ತಿಳಿಸಿದರು.
ಎಲ್ಲವನ್ನೂ ನೋಡುಕೊಂಡು ನಮ್ಮ ಮಕ್ಕಳಿಗೂ ಲಸಿಕೆ ಹಾಕಿಸಲಾಗುವುದು.ಹಿರಿಯರಿಗೆ ಮೊದಲು, ನಂತರ ಜನರನ್ನ ಸಂಪರ್ಕಿಸುವ ವೃತ್ತಿಯವರಿಗೆ.ಜೊತೆ ಜೊತೆಯಲ್ಲಿ ಎಲ್ಲರಿಗೂ ಎಲ್ಲಿಯವರೆಗೂ ತಲುಪಲು ಸಾಧ್ಯವೋ ಅಲ್ಲಿವರೆಗೂ ನೀಡುತ್ತೇವೆ ಎಂದರು.

ಎಲ್ಲರಿಗೂ ಲಸಿಕೆ ಪ್ರಕ್ರಿಯೆ ಮುಗಿಯುವ ವರೆಗೂ, ಮಾಸ್ಕ್ ಕಡ್ಡಾಯವಾಗಿ ಹಾಕುವಂತೆ ಮನವಿ ಮಾಡಿದರು.ಲಾಕ್ ಡೌನ್ ಅಂತ್ಯದ ವಿಚಾರವಾಗಿ ಮಾತನಾಡಿದ ಅವರು,ಲಾಕ್ ಡೌನ್‌ನಿಂದ ಏನೆಲ್ಲ ಒಳ್ಳೆಯದಾಗಿದೆ ಎನ್ನುವುದು ಗೊತ್ತಿದೆ.47ರಷ್ಟಿದ್ದ ಪಾಸಿಟಿವ್, ಕಳೆದ ಹದಿನೈದು ದಿನದಲ್ಲಿ 14-15ಕ್ಕೆ ಇಳಿದಿದೆ ಎಂದು
ಸುಧಾಕರ್ ಮಾಹಿತಿ ನೀಡಿದರು.

ಬೇರೆ ರಾಜ್ಯಗಳಲ್ಲಿ ನಮಗಿಂತ ಹೆಚ್ಚಿದ್ದ ಪ್ರಕರಣದಲ್ಲಿ ಈಗ 8 ಪರ್ಸೆಂಟಿಗೆ ಬಂದಿದೆ.ಇದೆಲ್ಲವನ್ಮೂ ನೋಡಿಕೊಂಡು, ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ಮಾಡಲಾಗುವುದು.ಅಂತಿಮವಾಗಿ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಫಂಗಸ್ ಖಾಯಿಲೆಗೆ ವ್ಯಾಕ್ಸಿನ್ ಕೊರತೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಲಸಿಕೆ ಕೊಡಿಸಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ.ಎಂಟಕ್ಕೂ ಹೆಚ್ಚು ಕಂಪನಿಗಳ ಜೊತೆ ಮಾತನಾಡಿ ತಯಾರಿಕೆ ಮಾಡಿಕೊಂಡಿದ್ದಾರೆ ಎಂದರು.

ದೇಶಾದ್ಯಂತ 80ಸಾವಿರ ವಯಲ್ಸ್ ಮಾರುಕಟ್ಟೆಗೆ ಬಂದಿದೆ.ನಮಗೂ 8-10 ಸಾವಿರ ವಯಲ್ಸ್ ಪೂರೈಸಿದ್ದಾರೆ.1,250 ಪ್ರಕರಣ ನಮ್ಮಲ್ಲಿದೆ ಎಂದು ತಿಳಿಸಿದರು.

ಸಾವಿನ ಪ್ರಕರಣಗಳ ಬಗ್ಗೆ ಲೆಕ್ಕ ಹಾಕಲು ಅಧಿಕಾರಿಗಳಿಗೆ ಹೇಳಿದ್ದೇನೆ..ಫಂಗಸ್‌ನಿಂದ 30-35 ಜನರ ಸಾವಾಗಿದೆ ಎಂದು ಹೇಳಲಾಗುತ್ತಿದೆ.ಆದರೆ ನಿಖರವಾಗಿ ಲೆಕ್ಕ ಮಾಡಿ ವರದಿ ನೀಡಲು ಹೇಳಿದ್ದೇನೆ ಎಂದರು‌ ಸುಧಾಕರ್ .

ಸರ್ಕಾರಿ ಮತ್ತಯ ಖಾಸಗಿ ಆಸ್ಪತ್ರೆಯಲ್ಲಿ ಎರಡೂ ಕಡೆ ನೀಡುತ್ತಿದ್ದೇವೆ..ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿಯಾಗಿಲ್ಲ.ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುತ್ತವೆ ಎಂದು ತಿಳಿಸಿದರು.

ಕೇಂದ್ರದಿಂದ ರೆಮಿಡಿಸಿವಿರ್ ಪೂರೈಕೆ ಮಾಡದಿರುವ ಬಗ್ಗೆ,ಮೊದಲು ಬೇಡಿಕೆ ಜಾಸ್ತಿ ಇದ್ದು, ಸರಬರಾಜು ಕಡಿಮೆ ಇದ್ದಾಗ ನಿಯಂತ್ರಣ ಮಾಡಲಾಗುತ್ತಿತ್ತು.ಯಾವ ರಾಜ್ಯಕ್ಕೆ ಎಷ್ಟು ಬೇಕೋ, ಅಷ್ಟು ಪೂರೈಸಲಾಗ್ತಿತ್ತು.ಈಗ ನಮಗೆ ಕೆಲ ಕಂಪನಿಗಳು ರೆಮಿಡಿಸಿವಿರ್ ಪೂರೈಕೆ ಮಾಡೋದಾಗಿ ಹೇಳುತ್ತಿವೆ ಎಂದು ವಿವರಿಸಿದರು.

ಆ ಕಾರಣಕ್ಕೆ ಕೇಂದ್ರ ಸರ್ಕಾರನಾವು ರಾಜ್ಯದ ನಿರ್ಧಾರಕ್ಕೆ ತಲೆ ಹಾಕಲ್ಲ ಎಂದು ಹೇಳಿವೆಮಾರುಕಟ್ಟೆಯಲ್ಲಿ ಈಗ ರೆಮಿಡಿಸಿವಿರ್ ಸಿಗಲಿದೆ, ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಮೂರನೇ ಅಲೆ ವಿಚಾರವಾಗಿ ನಾನು ಆರೋಗ್ಯ ಸಚಿವನಾಗಿ ಇಷ್ಟೇ ಹೇಳುತ್ತೇನೆ.ಯಾರಿಗೆ ಬಾದಿಸುತ್ತೆ, ಯಾರಿಗೆಲ್ಲಾ ಬಾದಿಸುತ್ತೆ ಅನ್ನೋದಕ್ಕಿಂತ .ಎರಡು ಲಸಿಕೆ ಡೋಸ್ ತೆಗೆದುಕೊಂಡಿದ್ದಾರೆ.ಎರಡು ಲಸಿಕೆ ಡೋಸ್ ತೆಗೆದುಕೊಳ್ಳೋ ವರೆಗೂ ಇದು ಮುಂದುವರೆಯಲಿದೆ ಎಂದರು.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ