Home / ರಾಜ್ಯ / ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರಕ್ಕೆ ಛತ್ತೀಸ್‌ಗಢ ಕೊಕ್

ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರಕ್ಕೆ ಛತ್ತೀಸ್‌ಗಢ ಕೊಕ್

Spread the love

ರಾಯಪುರ : ಕೋವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿರುವ ಬಗ್ಗೆ ವ್ಯಾಪಕ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ, ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢ ಸರ್ಕಾರ 18-44 ವರ್ಷ ವಯೋಮಿತಿಯ ಲಸಿಕೆ ಹಾಕಿಕೊಂಡವರಿಗೆ ತನ್ನದೇ ಪ್ರಮಾಣಪತ್ರ ನೀಡಲು ಆರಂಭಿಸಿದೆ. ಇದರಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಭಾವಚಿತ್ರವಿದೆ.

18-44 ವಯೋಮಿತಿಯವರು ಲಸಿಕೆಗೆ ನೋಂದಾಯಿಸಿಕೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ತನ್ನದೇ ಸಿಜಿಟೀಕಾ ಎಂಬ ಪೋರ್ಟೆಲ್ ನಿಯೋಜಿಸಿಕೊಂಡಿದ್ದು, ಲಸಿಕೆ ಹಾಕಿಕೊಂಡವರಿಗೆ ಕೇಂದ್ರ ಸರ್ಕಾರ ಲಸಿಕೆ ನೀಡಿಕೆಗೆ ಆರಂಭಿಸಿದ ಕೋವಿನ್ ಪೋರ್ಟೆಲ್ ಬದಲಾಗಿ ಈ ಪೋರ್ಟೆಲ್ ಮೂಲಕವೇ ಪ್ರಮಾಣಪತ್ರಗಳನ್ನು ನೀಡುತ್ತಿದೆ.

“ಇದರ ಬಗ್ಗೆ ಯಾವುದೇ ವಿವಾದ ಇಲ್ಲ. ಭಾರತ ಸರ್ಕಾರ ಹಣ ನೀಡಿ ಲಸಿಕೆ ಒದಗಿಸುವಾಗ ಪ್ರಧಾನಿಯವರ ಭಾವಚಿತ್ರ ಹಾಕುತ್ತದೆ. ಅದನ್ನೇ ರಾಜ್ಯ ಸರ್ಕಾರ ಮಾಡುವಾಗ, ನಾವು ಮುಖ್ಯಮಂತ್ರಿಗಳ ಭಾವಚಿತ್ರ ಹಾಕುತ್ತಿದ್ದೇವೆ. ಕೇಂದ್ರ ಸರ್ಕಾರ ಹಣಕಾಸು ಹೊರೆಯನ್ನು ರಾಜ್ಯಗಳಿಗೆ ಹೊರಿಸಿರುವಾಗ, ರಾಜ್ಯ ಸರ್ಕಾರ ತನ್ನದೇ ಲಸಿಕೆ ಖರೀದಿಸುತ್ತಿರುವಾಗ ತಮ್ಮದೇ ಲಸಿಕೆ ಪ್ರಮಾಣಪತ್ರಗಳನ್ನು ಏಕೆ ವಿತರಿಸಬಾರದು? ಕೋವಿಡ್ ಲಸಿಕೆ ಪ್ರಮಾಣಪತ್ರಗಳಲ್ಲಿ ಏಕೆ ನರೇಂದ್ರ ಮೋದಿಯವರ ಭಾವಚಿತ್ರ ಇರಬೇಕು?” ಎಂದು ಆರೋಗ್ಯ ಸಚಿವ ಟಿ.ಎಸ್.ಸಿಂಗ್‌ದೇವ್ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಈ ಕ್ರಮ, ಕೇಂದ್ರ ಯೋಜನೆಗಳ ಕೀರ್ತಿಯನ್ನು ತಮಗೆ ಪಡೆಯುವ ಹುನ್ನಾರ ಎಂದು ರಾಜ್ಯ ಬಿಜೆಪಿ ಅಪಾದಿಸಿದೆ. ರಾಜ್ಯಗಳು ಲಸಿಕೆ ಖರೀದಿಸಬೇಕು ಎನ್ನುವುದು ಕೇಂದ್ರದ ನಿರ್ಧಾರ; ಅಂತೆಯೇ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕು ಎನ್ನುವುದು ಕೇಂದ್ರದ ನಿರ್ಧಾರ. ಆದ್ದರಿಂದ ರಾಜ್ಯಗಳು ಕೂಡಾ ಪ್ರಧಾನಿ ಭಾವಚಿತ್ರವನ್ನೇ ಪ್ರಮಾಣಪತ್ರದಲ್ಲಿ ಹಾಕಬೇಕು ಎನ್ನುವುದು ಬಿಜೆಪಿ ವಾದ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ