Breaking News

ಗೋವಾದಲ್ಲಿ ಕೊರೋನಾ ಇಳಿಮುಖ: ಲಾಕ್ ಡೌನ್ ವಿಸ್ತರಣೆ

Spread the love

ಪಣಜಿ: ಗೋವಾ ರಾಜ್ಯದಲ್ಲಿ ಕರ್ಫ್ಯೂ ಲಾಕ್‍ಡೌನ್ ಮೇ 31 ರವೆಗೆ ವಿಸ್ತರಣೆ  ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಶುಕ್ರವಾರ ಮಂತ್ರಿಮಂಡಳ ಬೈಠಕ್‍ನನಂತರ ಲಾಕ್‍ಡೌನ್ ನಿರ್ಣಯವನ್ನು ಘೋಷಿಸಿದರು.
ಗೋವಾ ರಾಜ್ಯಾದ್ಯಂತ ಜೀವನಾವಶ್ಯಕ ವಸ್ತುಗಳ ಮಾರಾಟದ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾನ್ಹ 1 ಗಂಟೆಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇಷ್ಟೇ ಅಲ್ಲದೆ ವಿವಿಧ ಉದ್ಯೋಗ, ಕಛೇರಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮದುವೆ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಮೀನು ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಭಾನುವಾರದ ವರೆಗೆ ರಾಜ್ಯದಲ್ಲಿ ಕರ್ಫ್ಯ್ಯೂ ಲಾಕ್‍ಡೌನ್ ಜಾರಿಯಲ್ಲಿತ್ತು, ಆದರೆ ಸರ್ಕಾರವು ಇದೀಗ ಈ ಅವಧಿಯನ್ನು ಮೇ 31 ರವರೆಗೆ ವಿಸ್ತರಣೆ ಮಾಡಿದೆ.
      ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕರೋನಾ ಸೋಂಕಿತರ ಸಂಖ್ಯೆ ಭಾರಿ ಇಳಿಕೆಯಾಗಿದೆ, ಇಷ್ಟೇ ಅಲ್ಲದೆಯೇ ಸಾವಿನ ಪ್ರಮಾಣ ಕೂಡ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ಕೆಲ ದಿನ ಇದೇ ಕಟ್ಟುನಿಟ್ಟಾದ ಕ್ರಮವನ್ನು ಮುಂದುವರೆಸಿದರೆ ಗೋವಾ ರಾಜ್ಯ ಕರೋನಾ ಗೆಲ್ಲಲು ಸಾಧ್ಯ ಎಂದು ಗೋವಾ ಸರ್ಕಾರ ಅಭಿಪ್ರಾಯಪಟ್ಟಿದೆ.
       ಶುಕ್ರವಾರ ನಡೆದ ಮಂತ್ರಿಮಂಡಳ ಬೈಠಕ್‍ನಲ್ಲಿ ಕೂಡ ಹಲವು ಸಚಿವರು ರಾಜ್ಯದಲ್ಲಿ ಕರ್ಫ್ಯೂ ಲಾಕ್‍ಡೌನ್ ಅವಧಿಯನ್ನು ವಿಸ್ತರಣೆ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Spread the love

About Laxminews 24x7

Check Also

ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಅವಳಿನಗರದಲ್ಲಿನ 400 ಡ್ರಗ್ ಪೆಡ್ಲರ್ಸ್ ಹಾಗೂ ಸೇವನೆ ಮಾಡುವವರ ಪರೇಡ್

Spread the love ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ