Breaking News

ಪರಸ್ತ್ರೀ ಜತೆ ಯುವಕನ ಸಲ್ಲಾಪ! ಸೆಕ್ಸ್​ ಮಾಡುತ್ತಿರುವಾಗಲೇ ಸಿಕ್ಕಿಬಿದ್ದ ಜೋಡಿ. ಕ್ಷಣಾರ್ಧದಲ್ಲೇ ನಡೆಯಿತು ದುರಂತ

Spread the love

ಚಾಮರಾಜನಗರ: ಮನೆಯಲ್ಲಿ ಪತಿ ಇಲ್ಲದ ವೇಳೆ ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಪತ್ನಿ ಗಂಡನಿಗೆ ಗೊತ್ತಾಗದ್ದಂತೆ ಸರಸ-ಸಲ್ಲಾಪದಲ್ಲಿ‌ ತೊಡಗುತ್ತಿದ್ದಳು. ಸುಮಾರು ದಿನವಾದರೂ ಗಂಡನಿಗೆ ಪತ್ನಿಯ ಮೋಸ ಅರಿವಿಗೆ ಬರಲೇ ಇಲ್ಲ. ಆದರೆ ಗ್ರಾಮದಲ್ಲಿ ಗುಸು-ಗುಸು ಎದ್ದಿತ್ತು. ಈ ನಡುವೆ ಪ್ರೇಯಸಿಗೆ ಮುತ್ತಿಡುವಾಗ ಪ್ರಿಯಕರ ಕ್ಲಿಕ್ಕಿಸಿದ ಫೋಟೋ ಅಕ್ರಮ ಸಂಬಂಧದ ಗುಟ್ಟನ್ನು ರಟ್ಟು ಮಾಡಿಬಿಟ್ಟಿತ್ತು. ಮುತ್ತಿಟ್ಟ ಫೋಟೋವನ್ನು ವಾಟ್ಸ್​ಆಯಪ್​ ಸ್ಟೇಟಸ್​ಗೆ ಹಾಕಿಕೊಂಡ ಪ್ರಿಯಕರ ಪ್ರೇಯಸಿ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾನೆ.

ಇಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ‌ಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಶಿವಣ್ಣನ ಪತ್ನಿ ಸೌಭಾಗ್ಯ ಜತೆ ಬಸವಶೆಟ್ಟಿಗೆ ಅಕ್ರಮ ಸಂಬಂಧ ಇತ್ತು. ಸೌಭಾಗ್ಯಗೆ ಬಸವಶೆಟ್ಟಿ ಚುಂಬಿಸಿರುವ ಪೋಟೋವನ್ನೂ ನೋಡಿದ ಶಿವಣ್ಣ ಕೆಂಡಾಮಂಡಲವಾಗಿದ್ದ. ಅದೇ ಕೋಪದಲ್ಲಿ ಮನೆಗೆ ಬಂದ ಶಿವಣ್ಣನಿಗೆ ಕಂಡದ್ದು ತನ್ನ ಪತ್ನಿ ಪರಪುರಷನೊಂದಿಗೆ ಸಲ್ಲಾಪದಲ್ಲಿ ಮುಳುಗಿದ್ದ ದೃಶ್ಯ.

ಸಿಟ್ಟಿಗೆದ್ದ ಶಿವಣ್ಣ ತನ್ನ ಪತ್ನಿಯ ಪ್ರಿಯಕರ ಬಸವಶೆಟ್ಟಿಯನ್ನ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದ ಬಸವಶೆಟ್ಟಿ(26)ಯನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಬದುಕುಳಿಯಲಿಲ್ಲ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶಿವಣ್ಣ‌ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ