ಬನಹಟ್ಟಿ : ಕೋವಿಡ್ ಮೂರನೇ ಅಲೆ ಬರುತ್ತಿದೆ. ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ಅವರು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ-ಬನಹಟ್ಟಿ ನಗರಸಭೆ ಸಭಾ ಭವನದಲ್ಲಿ ನಡೆದ ಸರಕಾರಿ ಹಾಗೂ ಖಾಸಗಿ ವೈದ್ಯರ ಸಭೆಯಲ್ಲಿ ಮಾತನಾಡಿದರು.
ಸ್ಥಳೀಯರು ಆಕ್ಷಿಜನ್ ಸಾಂದ್ರಕ ಯಂತ್ರವನ್ನು ಸರಕಾರಿ ಆಸ್ಪತ್ರೆಗೆ ದೇಣಿಗೆಯಾಗಿ ನೀಡಿದ್ದರು. ಈ ವೇಳೆ ರಬಕವಿಯ ಖಾಸಗಿ ವೈದ್ಯ ರವಿ ಜಮಖಂಡಿ ಮಾತನಾಡುವ ಸಂದರ್ಭದಲ್ಲಿ ಇಂತಹ ಆಕ್ಸಿಜನ್ ಸಾಂದ್ರಕ ಯಂತ್ರಗಳನ್ನು ಸಹ ಸರಕಾರ ಹೆಚ್ಚು ನೀಡಬೇಕು ಇದರಿಂದ ಕೋವಿಡ್ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು ಆಗ ಸಚಿವರು ಮೂರನೇ ಅಲೆ ಬಂದ ಮೇಲೆ ನೋಡೋಣ ಎಂದರು. ಆಗ ವೈದ್ಯರು ಆವಾಗ ನಾವು ಉಳಿದರೆ ನೋಡೋಣ ಎಂದಾಗ ಸಚಿವರು ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು ಎಂದು ಹಾಸ್ಯಾಸ್ಪದವಾಗಿ ಹೇಳಿದರು.
ರೆಮಿಡಿಸಿವರ ಬಗ್ಗೆ ಯಾವುದೇ ಆತಂಕ ಬೇಡ, ಕೋವಿಡ್‌ಗೆ ಅದು ರಾಮಬಾಣವಲ್ಲ. ಆದರೆ ಜನರಿಗೆ ಅದು ಕೊಟ್ಟರೆ ಗುಣವಾಗುತ್ತೆ ಎಂಬ ನಂಬಿಕೆ ಇದೆ. ಈ ಬಗ್ಗೆ ಅವರಿಗೆ ಜಾಗೃತಿ ಮೂಡಿಸಿ, ಅದು ಇಲ್ಲದೇಯೂ ರೋಗಿ ಬದುಕಬಲ್ಲ ಎಂಬ ವಿಶ್ವಾಸವನ್ನು ಮೂಡಿಸಿ. ಜಿಲ್ಲೆಯಾದ್ಯಂತ ಆಕ್ಸಿಜನ್ ಕೊರತೆ ಇಲ್ಲ. ಆದರೆ ಆಕ್ಸಿಜನ್ ಬೆಡ್‌ಗಳ ಸಮಸ್ಯೆ ಉಂಟಾಗುತ್ತಿದೆ.
ಬೆಡ್‌ಗಳ ಸಮಸ್ಯೆ ಇದ್ದು, ಗುಣಮುಖರಾದವರು ಮನೆಯಲ್ಲಿ ವಿಶ್ರಾಂತ ಮಾಡಬೇಕು. ಅನಾವಶ್ಯಕವಾಗಿ ಅಲ್ಲೆಯೇ ಉಳಿಯುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿಕೊಂಡರು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಿದರು. ಇದರಿಂದಾಗಿ ಇತರೆ ಸೋಂಕಿತರಿಗೆ ಬೆಡ್‌ಗಳ ಅವಕಾಶ ಮಾಡಿಕೊಡಲು ಅನೂಕೂಲವಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್ ರೋಗ್ ಹೆಚ್ಚಾಗುತ್ತಿರುವುದರಿಂದ ಸೋಮವಾರದಿಂದ ಕಟ್ಟು ನಿಟ್ಟಾಗಿ ಲಾಕಡೌನ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಯಲ್ಲಿ ಆಕ್ಸಿಜನ್ ಇದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಿ ಅದರ ಬಗ್ಗೆ ಎಸ್‌ಪಿ ಅವರು ಹೆಚಿನ ಮುತುವರ್ಜಿವಹಿಸಬೇಕು. ಪಾಜಿಟಿವ್ ಕೇಸ್ ಬಂದವರನ್ನು ಮನೆಯಲ್ಲಿಯೇ ಇರಲು ಬೀಡದೆ. ಅವರನ್ನು ಸ್ಥಳೀಯ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲು ಪ್ರಯತ್ನಿಸಿ ಅಲ್ಲಿ ಆರೋಗ್ಯವಂತರಾಗಿ ನೆಗೆಟಿವ್ ಬಂದ ನಂತರ ಮನೆಗೆ ತೆರಳಲು ಅವಕಾಶ ನೀಡಿ ಎಂದರು.
ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ನಮ್ಮ ತಾಲೂಕಿಗೆ ಪ್ರಾತಿನಿಧ್ಯ ಕೊಡಿ, ಬೇರೆ ತಾಲೂಕಿಗೆ ಹೆಚ್ಚಿನ ಆಧ್ಯತೆ ನೀಡುತ್ತೀರಿ ನಮ್ಮದು ಒಂದು ತಾಲೂಕು ಇದ್ದು ಅದಕ್ಕೂ ಹೆಚ್ಚಿನ ಆಧ್ಯತೆ ನೀಡಬೇಕು. ಜಮಖಂಡಿಗೆ ಸೇರಿಸಿ ಆಧ್ಯತೆ ನೀಡುತ್ತಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ರಬಕವಿ-ಬನಹಟ್ಟಿ ಹೊಸ ತಾಲೂಕು ಇದ್ದು ಅದಕ್ಕೂ ಕೂಡಾ ಮಾನ್ಯತೆ ನೀಡಬೇಕು ಎಂದರು.