ಬೆಂಗಳೂರು: ರಾಜಧಾನಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದ ಸಂಸದ-ಶಾಸಕರು ಆ ನಂತರ ಕೋವಿಡ್ ವಾರ್ ರೂಮ್ಗೆ ನೇಮಿಸಲಾಗಿರುವ ಸಿಬ್ಬಂದಿಯ ಪಟ್ಟಿ ನೋಡಿ ಕೆಂಡಾಮಂಡಲವಾಗಿದ್ದಾರೆ. ಅವರನ್ನೆಲ್ಲ ನೇಮಿಸಿದ್ದು ಯಾರು, ಹೇಗೆ ನೇಮಿಸಿಕೊಳ್ಳಲಾಗಿದೆ ಎಂದು ಹೆಲ್ಪ್ಲೈನ್ ಉಸ್ತುವಾರಿಗಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋವಿಡ್ ವಾರ್ ರೂಮ್ಗೆ ನೇಮಿಸಲ್ಪಟ್ಟಿರುವ 17 ಮಂದಿಯ ಪಟ್ಟಿಯಲ್ಲಿದ್ದ ಹೆಸರುಗಳನ್ನು ಸಂಸದ ತೇಜಸ್ವಿ ಸೂರ್ಯ ಓದಿದ್ದಾರೆ. ಆ ಪಟ್ಟಿಯಲ್ಲಿ ಇದ್ದ ಹೆಸರುಗಳನ್ನು ಓದಿದ ತೇಜಸ್ವಿ ಸೂರ್ಯ, ಅಲ್ಲಿ ಬರೀ ಒಂದೇ ಸಮುದಾಯಕ್ಕೆ ಸೇರಿರುವವರು ಮಾತ್ರ ಇದ್ದಿದ್ದನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಕೂಡ ದನಿಗೂಡಿಸಿದ್ದು, ನಂತರ ನಾಲ್ವರೂ ಕೆಂಡಾಮಂಡಲರಾಗಿ ಆ ಕೇಂದ್ರದ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇವರೆಲ್ಲ ಯಾರು, ಇವರನ್ನು ನೇಮಿಸಿಕೊಳ್ಳಲು ಯಾವ ಮಾನದಂಡ ಅನುಸರಿಸಲಾಗಿದೆ. ನೇಮಿಸಿಕೊಂಡಿದ್ದು ಯಾರು, ಕರೆಸಿ ಆ ಏಜೆನ್ಸಿಯವರನ್ನು ಎಂದು ತೇಜಸ್ವಿ ಸೂರ್ಯ ಗದರಿದ್ದಾರೆ. ಇದೇನು ನೀವು ಮದರಸಗೆ ಅಪಾಯಿಂಟ್ ಮಾಡಿದ್ದೀರಾ ಇಲ್ಲ ಕಾರ್ಪೋರೇಷನ್ಗೆ? ಎಂದು ಶಾಸಕ ರವಿಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೀ ಇವರೇ ಬಿಟ್ಟರೆ ನಿಮಗೆ ಬೇರೆ ಯಾರೂ ಸಿಗಲೇ ಇಲ್ವಾ ಎಂದು ಶಾಸಕ ಸತೀಶ್ ರೆಡ್ಡಿ ಕೋಪದಿಂದಲೇ ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವೆಲ್ಲ ದೃಶ್ಯಗಳನ್ನು ಒಳಗೊಂಡಿರುವ ವಿಡಿಯೋ ತುಣುಕೊಂದು ವೈರಲ್ ಆಗುತ್ತಿದೆ.
ಬಿಬಿಎಂಪಿ ಕೋವಿಡ್ ವಾರ್ ರೂಮ್ ಸಿಬ್ಬಂದಿ ಪಟ್ಟಿ
1. ಮನ್ಸೂರ್ ಅಲಿ
2. ತಾಹಿರ್ ಅಲಿ ಖಾನ್
3. ಸಾದಿಕ್ ಪಾಷಾ
4. ಮೊಹಮದ್ ಜಾಯೆದ್
5. ಅಸ್ಲಯಿ ಸಹೀರ್
6. ಉಮೇರ್ ಖಾನ್
7. ಸಲ್ಮಾನ್ ಉರಿಫ್
8. ಜಮೀರ್ ಪಾಷಾ
9. ಜಬೀವುಲ್ಲಾ ಖಾನ್
10. ಸಯ್ಯದ್ ಹುಸೇನ್
11. ಸಯೇದ್ ಶಾಹಿದ್
12. ಸಯೀದ್ ಶಹಬಾಜ್
13. ಮಹಮದ್ ಯೂನುಸ್
14. ಸೈಯದ್ ಮೊಹಿನ್ ಷಾ
15. ಸೈಯಸ್ ಮೌಯೇಷ್ ಷಾ
16. ಅಲಿ ಸಾಹಿಲ್
Laxmi News 24×7