Breaking News

ಮೇ 1ರಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಏರಿಕೆ : ಅದಾನಿ ಕಂಪೆನಿ

Spread the love

ಮಂಗಳೂರು :ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆ ಪಡೆದಿರುವ ಖಾಸಗಿ ಕಂಪೆನಿ ವಿಮಾನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಶುಲ್ಕವನ್ನು ಗರಿಷ್ಠ ಪ್ರಮಾಣದಲ್ಲಿ ಏರಿಸಿರುವುದು ವಾಹನ ಚಾಲಕರ ಹಾಗೂ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣವನ್ನು ಗುತ್ತಿಗೆ ಪಡೆದಿರುವ ಅದಾನಿ ಕಂಪೆನಿ ಮೇ 1, ರಿಂದ ಹೊಸ ಪಾರ್ಕಿಂಗ್ ದರವನ್ನು ವಿಧಿಸುವುದಾಗಿ ಪ್ರಕಟಿಸಿದೆ.

ವಿಮಾನ ನಿಲ್ದಾಣದಲ್ಲಿ ದಿಢೀರ್ ಪಾರ್ಕಿಂಗ್ ಶುಲ್ಕ ಏರಿಸಿರುವುದು ಕೊರೋನ ಸಂಕಷ್ಟದ ಕಾಲದಲ್ಲಿ ಜನರ ಗಾಯದ ಮೇಲೆ ಇನ್ನೊಂದು ಬರೆ ಎಳೆದಂತಾಗಿದೆ ಎಂದು ಪ್ರಯಾಣಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೋಚ್ ಬಸ್, ಟ್ರಕ್ ಗಳಿಗೆ 30 ನಿಮಿಷಗಳ ವರೆಗೆ ವಿಧಿಸಲಾಗುತ್ತಿದ್ದ ಪಾರ್ಕಿಂಗ್ ಶುಲ್ಕವನ್ನು (ಹಿಂದಿನ ಶುಲ್ಕ 70ರೂ) 300 ರೂ. ಗಳಿಗೆ ಮತ್ತು ಎರಡು ಗಂಟೆವರೆಗೆ ಪಾರ್ಕಿಂಗ್ ಗೆ 500 ರೂ.ಗಳಿಗೂ ಏರಿಸಲಾಗಿದೆ.

ಮಿನಿ ಬಸ್, ಟೆಂಪೋ ಗಳಿಗೆ (ಹಿಂದಿನ ಶುಲ್ಕ 60ರೂ) 200 ರೂ. ಗಳಿಗೆ ಏರಿಸಲಾಗಿದೆ. ಎರಡು ಗಂಟೆಯವರೆಗೆ ನಿಂತರೆ 350 ರೂ. ಪಾವತಿಸಬೇಕು. ಬಾಡಿಗೆ ಕಾರುಗಳಿಗೆ ಹಿಂದಿನ ದರ ರೂ 55 ರಿಂದ 60 ರೂ.ಗಳಿಗೆ ಹಾಗೂ ವಾಣಿಜ್ಯ ಉದ್ದೇಶದ ಕಾರುಗಳಿಗೆ ರೂ. 90 ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳಿಗೆ ಹಿಂದಿನ ದರ 15 ರೂ. ಗಳಿಂದ 20 ರೂ.ಗಳಿಗೆ ಏರಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

ಅದೇ ರೀತಿ ದಿನ 24 ಗಂಟೆಗಳ ವಾಹನ ನಿಲುಗಡೆಗೆ ಗರಿಷ್ಠ ಏರಿಕೆ ಮಾಡಲಾಗಿದೆ. ವಾಹನ ನಿಲುಗಡೆ ನಿಯಮಗಳ ಉಲ್ಲಂಘನೆಗೆ ಪ್ರತ್ಯೇಕವಾದ ದಂಡ ವಸೂಲಾತಿಯ ಬಗ್ಗೆ ತಿಳಿಸಲಾಗಿದೆ. ಈ ದಂಡ ಕೋಚ್ ಬಸ್, ಟಪೋ, ಕಾರುಗಳಿಗೆ ರೂ. 500, ದ್ವಿಚಕ್ರ ವಾಹನಗಳಿಗೆ ರೂ. 250 ಎಂದು ನಿಗದಿಪಡಿಸಲಾಗಿದೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ