Breaking News

ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಬಜಾಜ್ ರಾಜೀನಾಮೆ, ನೀರಜ್ ಬಜಾಜ್ ನೂತನ ಅಧ್ಯಕ್ಷ

Spread the love

ನವದೆಹಲಿ:ರಾಹುಲ್ ಬಜಾಜ್ ಅವರು ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಿಂದ ಏಪ್ರಿಲ್ 30ರಂದು ಕೆಳಗಿಳಿಯಲಿದ್ದಾರೆ ಎಂದು ಬಜಾಜ್ ಆಟೋ ಗುರುವಾರ(ಏಪ್ರಿಲ್ 29) ಘೋಷಿಸಿದೆ.

ರಾಹುಲ್ (82ವರ್ಷ) ಅವರು ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇನ್ನು ಮುಂದೆ ಅವರು ಐದು ವರ್ಷಗಳ ಕಾಲ ಕಂಪನಿಯ ವಿಶ್ರಾಂತ ಅಧ್ಯಕ್ಷರಾಗಲಿದ್ದಾರೆ ಎಂದು ಬಜಾಜ್ ತಿಳಿಸಿದೆ. ಅಲ್ಲದೇ ನೀರಜ್ ಬಜಾಜ್ ಅವರು ಮೇ 1ರಂದು ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದೆ.

ರಾಹುಲ್ ಬಜಾಜ್ ಅವರು 1972ರಿಂದ ಸತತ ಐದು ದಶಕಗಳ ಕಾಲ ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರ ವಯಸ್ಸನ್ನು ಪರಿಗಣಿಸಿರುವುದಾಗಿ ತಿಳಿಸಿರುವ ಕಂಪನಿ, ಈ ಹಿನ್ನೆಲೆಯಲ್ಲಿ ರಾಹುಲ್ ಅವರು ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಬಜಾಜ್ ತಿಳಿಸಿದೆ.

ಬಜಾಜ್ ಕಂಪನಿಯ ಯಶಸ್ಸಿಗೆ ರಾಹುಲ್ ಅವರ ಕೊಡುಗೆ ಅಪಾರವಾಗಿದೆ. ಬಜಾಜ್ ಗ್ರೂಪ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಐದು ದಶಕಗಳ ಕಾಲ ಮುನ್ನಡೆಸಿದ್ದಾರೆ. ಅವರ ದೀರ್ಘಕಾಲದ ಅನುಭವ ಮತ್ತು ಆಸಕ್ತಿಯನ್ನು ಇನ್ನೂ ಮುಂದೆಯೂ ಕಂಪನಿಗೆ ಅಗತ್ಯವಾಗಿದೆ ಎಂದು ಬಜಾಜ್ ತಿಳಿಸಿದೆ.


Spread the love

About Laxminews 24x7

Check Also

ಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

Spread the loveಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ