ಕರೋನಾ ಎರಡನೆ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲೆಯ ಸಚಿವರು ಪ್ರಮುಖ ಸಭೆಯನ್ನು ನಡೆಸಿದರು ಈ ವೇಳೆ ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ಸಭೆಗೆ ಗೈ ರಾಗಿದ್ದು, ಡಿಸಿಎಂ ಸವದಿ ಕೆರಳಿ ಕೆಂಡವಾಗಿದ್ದಾರೆ.
ಸಭೆಯಲ್ಲಿ ಡಾ. ವಿನಯ ದಾಸ್ತಿಕೊಪ್ಪ ಗೈರಾಗಿರುವ ವಿಷಯ ತಿಳಿದ ಸವದಿ ಅವರು, ಬಿಮ್ಸ್ ನಿರ್ದೇಶಕ ಬಂದಿಲ್ಲ ಎಂದರೆ ಅರೇಸ್ಟ್ ಮಾಡಿ ಕರೆದುಕೊಂಡು ತನ್ನಿ, ಅರೇಸ್ಟ್ ಮಾಡಲು ಫುರ್ಸ್ ಕಳುಹಿಸಿ, ಅವರೆನು ಇಲ್ಲಿ ಹುಡುಗಾಟಿಕೆ ನಡೆಸಿದ್ದಾರಾ. ?? ಬಿಮ್ಸ್ ನಿರ್ದೇಶಕ್ ಆದರೆ ಅವನ ಪುರ್ತಿಗೆ ಇರುತ್ತಾನೆ, ಮಹತ್ವದ ಸಭೆಗೆ ಬರಲ್ಲ ಎಂದರೆ ಎನೂ ಅರ್ಥ ಎಂದು ಡಿಸಿಎಂ ಸವದಿ ಗರಂ ಆಗಿದ್ದಾರೆ.
ಈ ಸಭೆಯಲ್ಲ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಸಂಸದ ಅಣ್ಣಾ ಸಾಹೇಬ ಜೊಲ್ಲೆ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಸೇರಿದಂತೆ ಜಿಲ್ಲೆಯ ವಿಧಾನ ಸಭಾ ಸದಸ್ಯರು ಉಪಸ್ಥಿತರಿದ್ದರು.
Laxmi News 24×7