Breaking News
Home / Uncategorized / ಲಾಕ್ ಡೌನ್; ರಾತ್ರಿ 9ರ ನಂತರ ಸರ್ಕಾರಿ ಬಸ್ ಇಲ್ಲ

ಲಾಕ್ ಡೌನ್; ರಾತ್ರಿ 9ರ ನಂತರ ಸರ್ಕಾರಿ ಬಸ್ ಇಲ್ಲ

Spread the love

ಬೆಂಗಳೂರು, ಏಪ್ರಿಲ್ 27; ಕರ್ನಾಟಕ ಸರ್ಕಾರ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಮಂಗಳವಾರ ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ಬರಲಿದೆ.

ಕರ್ನಾಟಕ ಸರ್ಕಾರದ ಮಾರ್ಗಸೂಚಿ ಅನ್ವಯ ಅಗತ್ಯ ಸೇವೆಗಳ ಸರಕು ಸಾಗಣೆಗೆ ಮಾತ್ರ ವಾಹನ ಸಂಚಾರ ಇರುತ್ತದೆ. ಖಾಸಗಿ, ಸರ್ಕಾರಿ ಬಸ್‌ಗಳ ಸಂಚಾರ ರಾಜ್ಯಾದ್ಯಂತ ಸ್ಥಗಿತಗೊಳ್ಳಲಿದೆ.

 

ಬೆಂಗಳೂರು ನಗರದಿಂದ ಇತರ ಪ್ರದೇಶಗಳಿಗೆ ತೆರಳುವ ಜನರು ರಾತ್ರಿ 9 ಗಂಟೆಯೊಳಗೆ ಹೊರಡಬೇಕು. 9 ಗಂಟೆ ಬಳಿಕ ಯಾವುದೇ ಸರ್ಕಾರಿ ಬಸ್‌ಗಳ ಸಂಚಾರ ಇರುವುದಿಲ್ಲ. ಕೆಎಸ್‌ಆರ್‌ಟಿಸಿ ಈ ಕುರಿತು ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.

 

ಸೋಮವಾರ ರಾತ್ರಿ ಬೆಂಗಳೂರಿನಿಂದ ಹೊರ ಹೋಗುವ ಜನರು ಹೆಚ್ಚಿದ್ದ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಸುಮಾರು 300 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿತ್ತು.

 

ಮಂಗಳವಾರ ಬೆಳಗ್ಗೆಯಿಂದಲೂ ಸಹ ಸಾವಿರಾರು ಜನರು ಬೆಂಗಳೂರು ನಗರವನ್ನು ಬಿಟ್ಟು ತವರಿಗೆ ವಾಪಸ್ ಆಗುತ್ತಿದ್ದಾರೆ. ಬೇರೆ ಪ್ರದೇಶಗಳಿಗೆ ಹೋಗುವವರು 9 ಗಂಟೆಗೆ ನಗರದಿಂದ ಹೊರಡಬೇಕು.

ಮಂಗಳವಾರ ರಾತ್ರಿ 9 ರಿಂದ ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಗೆ ಬರಲಿದೆ. ಲಾಕ್ ಡೌನ್ ಜಾರಿಗೊಂಡ ಬಳಿಕ ಪೊಲೀಸರು ಫ್ಲೈ ಓವರ್, ರಸ್ತೆಗಳನ್ನು ಬಂದ್ ಮಾಡಲಿದ್ದಾರೆ. ಜನರು ಖಾಸಗಿ ವಾಹನಗಳ ಮೂಲಕವೂ ಸಂಚಾರ ನಡೆಸುವಂತಿಲ್ಲ.

ಜನರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಮುಂಜಾನೆ 6 ರಿಂದ ದ 10 ಗಂಟೆಯ ತನಕ ಅವಕಾಶ ನೀಡಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಬಾರ್‌ಗಳಲ್ಲಿ ಪಾರ್ಸೆಲ್‌ಗಳನ್ನು ಪಡೆಯಲು ಅವಕಾಶವಿದೆ.


Spread the love

About Laxminews 24x7

Check Also

ಸರ್ಕಾರಿ ಜಾಗಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ

Spread the love ಚಿಕ್ಕಮಗಳೂರು: ಸರ್ಕಾರಿ ಜಾಗದ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದ್ದು ರಾತ್ರೋ ರಾತ್ರಿ 50 ಮಂದಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ